Download Our App

Follow us

Home » ಕರ್ನಾಟಕ » ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಕಲಿ ಅಧಿಕಾರಿಗಳ ಹಾವಳಿ. ಎಮ್ ಟಿ ನಾಯಕರ ವಾಹನದಲ್ಲಿ ಸಂತೋಷನ ಚೆಲ್ಲಾಟ

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಕಲಿ ಅಧಿಕಾರಿಗಳ ಹಾವಳಿ. ಎಮ್ ಟಿ ನಾಯಕರ ವಾಹನದಲ್ಲಿ ಸಂತೋಷನ ಚೆಲ್ಲಾಟ

ಹುಬ್ಬಳ್ಳಿಯ ಸರಕು ಮತ್ತು ಸೇವಾ ತೆರಿಗೆ ಇಲಾಖೆ ( ವಾಣಿಜ್ಯ ತೆರಿಗೆ ) ಯಲ್ಲಿ ನಕಲಿ ಅಧಿಕಾರಿಗಳ ಹಾವಳಿ ಮಿತಿಮೀರಿದೆ. 

ಸಂತೋಷ ಎಂಬಾತ ತಾನು ವಾಣಿಜ್ಯ ತೆರಿಗೆ ಇಲಾಖೆಯ ಇನ್ಸಪೆಕ್ಟರ ಎಂದು ಹೇಳಿ ಸರಕು ವಾಹನಗಳನ್ನು ನಿಲ್ಲಿಸಿ ಹಣ ವಸೂಲಿ ಮಾಡುವ ಆರೋಪ ಕೇಳಿ ಬಂದಿದೆ. 

ಕೇರಳ ಮೂಲದ ಸರಕು ವಾಹನದ ಮಾಲೀಕನ ಕಡೆಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾರೆ. ಸಂತೋಷ ಎಂಬಾತ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ( CTO ) ಎಮ್ ಟಿ ನಾಯಕ ಅವರ ವಾಹನದಲ್ಲಿ ಕುಳಿತು ಡೀಲ್ ಮಾಡುತ್ತಿದ್ದಾನೆ ಎನ್ನಲಾಗಿದೆ. 

ಸರಕು ವಾಹನಗಳನ್ನು ನಿಲ್ಲಿಸುವ ಈತ ತನ್ನ ಮೊಬೈಲ್ ಸಂಖ್ಯೆ 6360923278 ದಿಂದ ಮಾತಾಡಿ, ಡೀಲ್ ಕುದುರಿಸುತ್ತಿದ್ದಾನೆ. ಕಳೆದ ಒಂದು ವಾರದಲ್ಲಿ ಮೂರು ಬಾರಿ ಡೀಲ್ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ವಾಣಿಜ್ಯ ತೆರಿಗೆ ಇಲಾಖೆ ( ಜಾರಿ ) ಜಂಟಿ ಆಯುಕ್ತ, ರವಿಕುಮಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ಹೋದಲ್ಲಿ, ಮತ್ತಷ್ಟು ಇಂತಹ ಘಟನೆಗಳು ಮರುಕಳಿಸುವಲ್ಲಿ ಎರಡು ಮಾತಿಲ್ಲ

Karnataka Files
Author: Karnataka Files

Leave a Comment

RELATED LATEST NEWS

Top Headlines

ಫೈರೋಜ್ ಕೊಲೆ ಕೇಸ್ : ಇಸ್ಮಾಯಿಲ್ ತಮಟಗಾರ ವಿರುದ್ದ ರಾಜಕೀಯ ಷಡ್ಯಂತ್ರನಾ ? ನ್ಯಾಯ ಸಮ್ಮತ ತನಿಖೆ ಆಗಲಿ

ಉತ್ತರ ಕರ್ನಾಟಕದ ಮುಸ್ಲಿಮ್ ಸಮುದಾಯದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದ ಇಸ್ಮಾಯಿಲ್ ತಮಟಗಾರ, ಆಡಿದ ಅದೊಂದು ಮಾತು ಅವರ ರಾಜಕೀಯ ಭವಿಷ್ಯಕ್ಕೆ ಬರೆ ನೀಡಿದೆ. ಆಳ, ಅಗಲ ಯೋಚಿಸದೆ

Live Cricket

error: Content is protected !!