Download Our App

Follow us

Home » ಕರ್ನಾಟಕ » ಚಳಿಗಾಲ ಅಧಿವೇಶನಕ್ಕೆ ಬೆಳಗಾವಿ ಸಜ್ಜು. ನಾಳೆಯಿಂದ ಕಲಾಪ ಆರಂಭ.

ಚಳಿಗಾಲ ಅಧಿವೇಶನಕ್ಕೆ ಬೆಳಗಾವಿ ಸಜ್ಜು. ನಾಳೆಯಿಂದ ಕಲಾಪ ಆರಂಭ.

ಬೆಳಗಾವಿಯ ಸುವರ್ಣಸೌಧದಲ್ಲಿ ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. 

ನಾಳೆಯಿಂದ ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. 

ಮತ್ತೊಂದೆಡೆ ನಾಳೆಯಿಂದ ಆರಂಭವಾಗುವ ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಪ್ರತಿಪಕ್ಷಗಳು ರೂಪುರೇಷೆ ಸಿದ್ದಪಡಿಸಿದ್ರೆ, ಸರ್ಕಾರ ಸಹ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಗೆ ಉತ್ತರಿಸಲು ಸಿದ್ದತೆ ಮಾಡಿಕೊಂಡಿದೆ.

ಮೈಸೂರಿನ ಮೂಡಾ ಹಗರಣ, ವಕ್ಫ ವಿಚಾರ, ವಾಲ್ಮೀಕಿ ಹಗರಣ, ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಪ್ರಕರಣ ಸದ್ದು ಮಾಡುವ ಸಾಧ್ಯತೆ ಇದೆ.

ಇದೇ ವೇಳೆ ಕಾಂಗ್ರೇಸ್ ಸರ್ಕಾರ ಸಹ, ಕೊರೋನಾ ಸಮಯದಲ್ಲಿ ನಡೆದ ಬ್ರಷ್ಟಾಚಾರದ ಮೈಕಲ್ ಕುನ್ನಾ ವರದಿ, ಬಿ ಡಿ ಎ ಹಗರಣ, ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟಗಳಂತಹ ವಿಷಯ ಪ್ರಸ್ತಾಪಿಸಲು ತಯಾರಾಗಿದೆ.

ನಾಳೆ ಕಲಾಪ ಆರಂಭವಾಗುತ್ತಿದ್ದಂತೆ ಅಗಲಿದ ನಾಯಕರುಗಳಿಗೆ ಸಂತಾಪ ಸೂಚಿಸಿದ ಬಳಿಕ ಅಧಿಕೃತ ಕಲಾಪ ಆರಂಭವಾಗಲಿದೆ

Karnataka Files
Author: Karnataka Files

Leave a Comment

RELATED LATEST NEWS

Top Headlines

ಐತಿಹಾಸಿಕ ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರನ್ನು ಅಭಿನಂದಿಸಿದ ಇಸ್ಮಾಯಿಲ್ ತಮಟಗಾರ

ಧಾರವಾಡ ಅಂಜುಮನ್ ಇಸ್ಮಾಯಿಲ್ ತಮಟಗಾರ ಅವರು 17 ನೇ ಐತಿಹಾಸಿಕ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಭಿನಂಧಿಸಿದರು. ಬಜೆಟ್ ನಲ್ಲಿ  ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಿಶೇಷ ಯೋಜನೆಗಳನ್ನು ಕೊಟ್ಟಿರುವ

Live Cricket

error: Content is protected !!