Download Our App

Follow us

Home » ಕಾನೂನು » ಸಿಂದನೂರಿನಲ್ಲಿ ವಿಧ್ಯಾರ್ಥಿನಿಯ ಭೀಕರ ಕೊಲೆ

ಸಿಂದನೂರಿನಲ್ಲಿ ವಿಧ್ಯಾರ್ಥಿನಿಯ ಭೀಕರ ಕೊಲೆ

ಪಾಗಲ್ ಪ್ರೇಮಿಯೂಬ್ಬ ಎಮ್ ಎಸ್ ಸಿ ವಿಧ್ಯಾರ್ಥಿನಿಯನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಸಿಂದನೂರಿನಲ್ಲಿ ನಡೆದಿದೆ.

ಲಿಂಗಸೂಗೂರಿನವಳಾದ ಶಿಫಾ, ಸಿಂಧನೂರಲ್ಲಿ ಎಮ್ ಎಸ್ ಸಿ ಓದುತ್ತಿದ್ದಳು. ಆಕೆ ಎಂದಿನಂತೆ ಕಾಲೇಜಿಗೆ ಹೋಗಿದ್ದಾಳೆ. 

ಆಕೆಯ ಹಿಂದೆಯೇ ಬೈಕ್ ನಲ್ಲಿ ಸಿಂಧನೂರು ತಲುಪಿದ ಮುಬಿನ್ ಎಂಬಾತ, ನಿನ್ನ ಜೊತೆ ಮಾತನಾಡುವದಿದೆ ಎಂದು ಹೇಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ನೋಡ ನೋಡುತ್ತಿದ್ದಂತೆ ಆರೋಪಿ ಮುಬಿನ್ ಚಾಕುವಿನಿಂದ ಆಕೆಯ ಕುತ್ತಿಗೆ ಕತ್ತರಿಸಿದ್ದಾನೆ. 

ಆರೋಪಿ ಮುಬಿನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಟೈಲ್ಸ್ ಕೆಲಸ ಮಾಡುತ್ತಿದ್ದ ಮುಬಿನ್, 8 ವರ್ಷಗಳಿಂದ ಶಿಫಾ ಬೆನ್ನು ಬಿದ್ದಿದ್ದ ಎನ್ನಲಾಗಿದೆ. 

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಬಿ.ಎಸ್. ತಳವಾರ, ಸಿಪಿಐ ವೀರಾರೆಡ್ಟಿ, ಪಿಎಸ್ ಐಗಳಾದ ಯರಿಯಪ್ಪ, ಸುಜಾತ, ಬಸವರಾಜ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ

Karnataka Files
Author: Karnataka Files

Leave a Comment

RELATED LATEST NEWS

error: Content is protected !!