ಧಾರವಾಡ ತಾಲೂಕಿನ ಮುಗದ ಗ್ರಾಮದ ಅಲ್‌ಹಾಜ್ ಎಸ್ ಎಸ್ ಪೀರಜಾದೆ (84) ಅವರು ಇಂದು ಪೈಗಂಬರವಾಸಿಯಾದರು.
ಇವರು ಮುಗದ ಗ್ರಾಮದ ಹಜರತ್ ಸಯ್ಯದ್ ಸಾಬಿತ್ ಅಲಿ ಶಾ ದರ್ಗಾದ ಮತ್ತು ಹಜರತ್ ದಾದಾಪೀರ ಶಾ ನಾಗಲಾವಿ ದರ್ಗಾದ ಸಜ್ಜಾದ ನಶೀನ್ ಆಗಿದ್ದರು.

ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಹೊಂದಿದ್ದ ಪೀರಜಾದೆ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಭಕ್ತರನ್ನು ಹೊಂದಿದ್ದರು.
ಧಾರವಾಡ ತಾಲೂಕಿನ ಮುಗದ ಗ್ರಾಮದಲ್ಲಿ ನೆಲೆಸಿದ್ದ ಇವರ ಅಂತ್ಯಕ್ರೀಯೆ ನಾಳೆ ಬೆಳಿಗ್ಗೆ 10 ಗಂಟೆಗೆ ವರವ ನಾಗಲಾವಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Author: Karnataka Files
Post Views: 3





