Download Our App

Follow us

Home » ಕಾನೂನು » ವಿಜಯಪುರದಲ್ಲಿ ಜೋಡಿ ಕೊಲೆ

ವಿಜಯಪುರದಲ್ಲಿ ಜೋಡಿ ಕೊಲೆ

ವಿಜಯಪುರದ ಕನ್ನೂರ ಗ್ರಾಮದಲ್ಲಿ ಜೋಡಿ ಕೊಲೆ ನಡೆದಿದೆ.

ಕಲ್ಲಿನಿಂದ ಜಜ್ಜಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 

ವಿಜಯಪುರ ತಾಲೂಕಿನ ಕನ್ನೂರು ಗ್ರಾಮ ಭೀಕರ ಕೊಲೆಗೆ ಬೆಚ್ಚಿ ಬಿದ್ದಿದೆ.

ಸಾಗರ ಬೆಳುಂಡಗಿ ಹಾಗೂ ಇಸಾಕ್ ಖರೇಷಿ ಎಂಬುವವರನ್ನು ಕೊಲೆ ಮಾಡಲಾಗಿದೆ. 

ಹಳೆಯ ವೈಷಮ್ಯದಿಂದ ಸಾಗರ್ ಹಾಗೂ ಇಸಾಕ್ ಮೇಲೆ ಹಲ್ಲೆ ಮಾಡಿ ಕೊಲೆಗೈದಿರೋ ಶಂಕೆ ವ್ಯಕ್ತವಾಗಿದೆ. 

ಎರಡು ವರ್ಷಗಳ ಹಿಂದೆ ಈರನಗೌಡ ಮೇಲೆ ತೀವ್ರ ಹಲ್ಲೆ ಮಾಡಿದ್ದ ಇಸಾಕ್ ಖರೇಷಿ ಹಾಗೂ ಸಾಗರ ಎಂಬಾತ, ಆತನ ಸಾವಿಗೆ ಕಾರಣರಾಗಿದ್ದರು.

ಇದೇ ದ್ವೇಷ ಕೊಲೆಗೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ. 

ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಧಾಖಲಾಗಿದೆ. 

Karnataka Files
Author: Karnataka Files

Leave a Comment

RELATED LATEST NEWS

error: Content is protected !!