ಎಚ್ಚರ! ಎಚ್ಚರ
ಹಲವು ಬಿರುದುಗಳಿಂದ ಕರೆಯಲ್ಪಡುವ ಧಾರವಾಡ ಮೊದಲಿನಂತೆ ಉಳಿದಿಲ್ಲ.
ಧಾರವಾಡದಲ್ಲಿ ಕಣ್ಮುಚ್ಚಿ ಏಳುವದರೊಳಗೆ ನಿಮ್ಮ ಆಸ್ತಿ ಮತ್ತೊಬ್ಬರ ಪಾಲು ಆಗುತ್ತದೆ. ಇದಕ್ಕೆ ಭೂ ಮಾಫಿಯಾದವರ ಜೊತೆ ಕೆಲ ಕಂದಾಯ ಅಧಿಕಾರಿಗಳು ಸೇರಿರುವ ಸಂಗತಿ ಬೆಳಕಿಗೆ ಬಂದಿದೆ.
ಕರ್ನಾಟಕ ಫೈಲ್ಸ್ ಕೈಗೊಂಡ ತನಿಖಾ ವರದಿಯಲ್ಲಿ ಬೆಚ್ಚಿ ಬೀಳಿಸುವ ಅಂಶಗಳು ಪತ್ತೆಯಾಗಿವೆ.
ಭಾರತೀಯ ನೌಕಾಪಡೆಯ ಮೂರನೇ ಅತೀ ದೊಡ್ಡ ಹುದ್ದೆಯಲ್ಲಿರುವ ರೇರ್ ಅಡ್ಮಿರಲ್ ವಿಕ್ರಮ್ ಮೆನನ್ ಇವರ ಅಜ್ಜನ ಹೆಸರಿನಲ್ಲಿರುವ ಧಾರವಾಡದ ದೊಡ್ಡನಾಯಕನಕೊಪ್ಪದಲ್ಲಿರುವ ಆಸ್ತಿಯನ್ನು ಲಪಟಾಯಿಸಲಾಗಿದೆ.
ಧಾರವಾಡದ ದೊಡ್ಡನಾಯಕನಕೊಪ್ಪ ಸರಹದ್ದಿನಲ್ಲಿರುವ ಸರ್ವೇ ನಂಬರ್ 6/2 ರಲ್ಲಿನ 8.8 ಗುಂಟೆ ಶೇತಕಿ ಜಮೀನು ಬೇರೊಬ್ಬರ ಹೆಸರಿಗೆ ನೋಂದಣಿ ಮಾಡಲಾಗಿದೆ.
2022 ರ ಪಹಣಿಯಲ್ಲಿ ವಿಕ್ರಮ್ ಮೆನನ್ ಅವರ ಅಜ್ಜ ಹಾಗೂ ಅಜ್ಜನ ಸಹೋದರರ ಜಂಟಿ ಹೆಸರಲ್ಲಿದ್ದ ಆಸ್ತಿ ಇದೀಗ ಬೇರೊಬ್ಬರ ಹೆಸರಿಗೆ ವರ್ಗಾವಣೆಗೊಂಡಿದೆ.
ಈ ಗೋಲ್ಮಾಲ್ ನಲ್ಲಿ ಧಾರವಾಡ ತಹಸೀಲ್ದಾರ್ ಕಚೇರಿಯ ಅಧಿಕಾರಿಗಳು ಶಾಮೀಲಾಗಿದ್ದು ಕರ್ನಾಟಕ ಫೈಲ್ಸ್ ಗೆ ಅಧಿಕೃತ ಧಾಖಲೆಗಳು ಲಭ್ಯವಾಗಿವೆ.
ನೀವು ಧಾರವಾಡದವರಾಗಿದ್ದರೆ, ನಿಮ್ಮ ಆಸ್ತಿ ಧಾರವಾಡದಲ್ಲಿ ಇದ್ದರೆ, ಒಮ್ಮೆ ನಿಮ್ಮ ಆಸ್ತಿಯ ಪಹಣಿ ತೆಗೆಸಿ ನೋಡುವದು ಉತ್ತಮ. ಯಾಕಂದ್ರೆ ಭೂಮಿ ಕಳ್ಳರು ಕಂದಾಯ ಇಲಾಖೆಯಲ್ಲಿಯೇ ಇದ್ದಾರೆ.





