ನಾಯಿ ಕಡಿತದ ಪ್ರಕರಣಗಳು ಆತಂಕ ಮೂಡಿಸಿವೆ. ಕೇವಲ ಮೂರು ವರ್ಷಗಳಲ್ಲಿ 13.5 ಲಕ್ಷಕ್ಕೂ ಹೆಚ್ಚು ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ.
ತಮಿಳುನಾಡು (12.9 ಲಕ್ಷ), ಗುಜರಾತ್ (8.4 ಲಕ್ಷ) ನಂತರದ ಸ್ಥಾನಗಳಲ್ಲಿವೆ. 2024 ರಲ್ಲಿ ಕರ್ನಾಟಕದಲ್ಲಿ 3.6 ಲಕ್ಷ ಜನರಿಗೆ ನಾಯಿ ಕಡಿತದ ಪ್ರಕರಣಗಳು ನಡೆದಿವೆ.
ಅಲ್ಲದೇ ರಾಜ್ಯದಲ್ಲಿ 42 ಜನ ರೇಬೀಸ್ ರೋಗದಿಂದ ಸಾವನ್ನಪ್ಪಿದ್ದಾರೆ. ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳು ಅತಿದೊಡ್ಡ ಏರಿಕೆಯನ್ನು ಎದುರಿಸುತ್ತಿವೆ.
ಭಾರತದಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
2022 ರಲ್ಲಿ 21.9 ಲಕ್ಷ, 2023 ರಲ್ಲಿ 30.5 ಲಕ್ಷ, ಹಾಗೂ 2024 ರಲ್ಲಿ 37.1 ಲಕ್ಷ ನಾಯಿ ಕಡಿತದ ಪ್ರಕರಣಗಳು ಕಂಡು ಬಂದಿವೆ.
Author: Karnataka Files
Post Views: 2





