ಧಾರವಾಡ ಜಿಲ್ಲೆಯಲ್ಲಿ ನಡೆದ ಸಾಮಾಜಿಕ ಸಮೀಕ್ಷಾ ಕಾರ್ಯ ಮುಗಿದಿದ್ದು, 24 ಲಕ್ಷ ಕುಟುಂಬಗಳ ಪೈಕಿ 21 ಲಕ್ಷ ಕುಟುಂಬಗಳ ಸಮೀಕ್ಧೆ ಪೂರ್ಣಗೊಂಡಿದೆ ಎನ್ನಲಾಗಿದೆ.
ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದ ಗಣತಿದಾರರಿಗೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಗೌರವ ಧನ, ಭತ್ಯೆ ಸೇರಿದಂತೆ 7 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
ಹುಬ್ಬಳ್ಳಿ ಧಾರವಾಡ ಹೊರತು ಪಡಿಸಿ ನವಲಗುಂದ, ಕುಂದಗೋಳ, ಕಲಘಟಗಿ, ಅಳ್ನಾವರ, ಅಣ್ಣಿಗೇರಿ ತಾಲೂಕಿನಲ್ಲಿನ ಗಣತಿದಾರರಿಗೆ ಭತ್ಯೆ ಬಿಡುಗಡೆ ಮಾಡಲಾಗಿದೆ.
ಪ್ರತಿಯೊಬ್ಬರಿಗೆ ತಲಾ 5 ಸಾವಿರ ರೂಪಾಯಿ ಗೌರವ ಧನ ಹಾಗೂ ಕುಟುಂಬದಲ್ಲಿ ಇಬ್ಬರ ಸಮೀಕ್ಷೆ ನಡೆಸಿದರೆ 50 ರೂಪಾಯಿ, ಮತ್ತು ಮೂರಕ್ಕಿಂತ ಹೆಚ್ಚಿಗೆ ಜನರ ಸಮೀಕ್ಷೆ ನಡೆಸಿದರೆ ನೂರು ರೂಪಾಯಿ ಲೆಕ್ಕದಲ್ಲಿ ಗಣತಿದಾರರ ಖಾತೆಗೆ ಹಣ ಜಮಾ ಮಾಡಲಾಗಿದೆ.
ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 20 ರ ವರೆಗೆ ಧಾರವಾಡ ಜಿಲ್ಲೆಯಲ್ಲಿ ನಡೆದ ಸಮೀಕ್ಷೆಯಲ್ಲಿ ಒಟ್ಟು 4400 ಗಣತಿದಾರರು ತೊಡಗಿಕೊಂಡಿದ್ದರು.
Author: Karnataka Files
Post Views: 148





