Download Our App

Follow us

Home » ಕಾನೂನು » ಧಾರವಾಡ ಜಿಲ್ಲೆಯಲ್ಲಿ ನಡೆದ ಸಾಮಾಜಿಕ ಸಮೀಕ್ಷೆ ಕಾರ್ಯಕ್ಕೆ 7 ಕೋಟಿ ಖರ್ಚು

ಧಾರವಾಡ ಜಿಲ್ಲೆಯಲ್ಲಿ ನಡೆದ ಸಾಮಾಜಿಕ ಸಮೀಕ್ಷೆ ಕಾರ್ಯಕ್ಕೆ 7 ಕೋಟಿ ಖರ್ಚು

ಧಾರವಾಡ ಜಿಲ್ಲೆಯಲ್ಲಿ ನಡೆದ ಸಾಮಾಜಿಕ ಸಮೀಕ್ಷಾ ಕಾರ್ಯ ಮುಗಿದಿದ್ದು, 24 ಲಕ್ಷ ಕುಟುಂಬಗಳ ಪೈಕಿ 21 ಲಕ್ಷ ಕುಟುಂಬಗಳ ಸಮೀಕ್ಧೆ ಪೂರ್ಣಗೊಂಡಿದೆ ಎನ್ನಲಾಗಿದೆ. 

ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದ ಗಣತಿದಾರರಿಗೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಗೌರವ ಧನ,  ಭತ್ಯೆ ಸೇರಿದಂತೆ 7 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಹುಬ್ಬಳ್ಳಿ ಧಾರವಾಡ ಹೊರತು ಪಡಿಸಿ ನವಲಗುಂದ, ಕುಂದಗೋಳ, ಕಲಘಟಗಿ, ಅಳ್ನಾವರ, ಅಣ್ಣಿಗೇರಿ ತಾಲೂಕಿನಲ್ಲಿನ ಗಣತಿದಾರರಿಗೆ ಭತ್ಯೆ ಬಿಡುಗಡೆ ಮಾಡಲಾಗಿದೆ.

ಪ್ರತಿಯೊಬ್ಬರಿಗೆ ತಲಾ 5 ಸಾವಿರ ರೂಪಾಯಿ ಗೌರವ ಧನ ಹಾಗೂ ಕುಟುಂಬದಲ್ಲಿ ಇಬ್ಬರ ಸಮೀಕ್ಷೆ ನಡೆಸಿದರೆ 50 ರೂಪಾಯಿ, ಮತ್ತು ಮೂರಕ್ಕಿಂತ ಹೆಚ್ಚಿಗೆ ಜನರ ಸಮೀಕ್ಷೆ ನಡೆಸಿದರೆ ನೂರು ರೂಪಾಯಿ ಲೆಕ್ಕದಲ್ಲಿ ಗಣತಿದಾರರ ಖಾತೆಗೆ ಹಣ ಜಮಾ ಮಾಡಲಾಗಿದೆ. 

ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 20 ರ ವರೆಗೆ ಧಾರವಾಡ ಜಿಲ್ಲೆಯಲ್ಲಿ ನಡೆದ ಸಮೀಕ್ಷೆಯಲ್ಲಿ ಒಟ್ಟು 4400 ಗಣತಿದಾರರು ತೊಡಗಿಕೊಂಡಿದ್ದರು.

Karnataka Files
Author: Karnataka Files

Leave a Comment

RELATED LATEST NEWS

error: Content is protected !!