ಧಾರವಾಡದಲ್ಲಿ ಏಪ್ರಿಲ್ 10 ರಂದು ನಡೆದ ಫೈರೋಜ್ ಪಠಾಣ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಹಂತಕರಿಗೆ ಧಾರವಾಡ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ.
ಫೈರೋಜ್ ಪಠಾಣ ಕೊಲೆ ಕೇಸಿನಲ್ಲಿ ಜೈಲಿನಲ್ಲಿರುವ ಮೈನು ನದಾಫ ಕೈಯಲ್ಲಿ ಮೊಬೈಲ್ ಇರುವ ವಿಡಿಯೋ ಒಂದನ್ನ ಮೃತ ಫೈರೋಜ್ ಪಠಾಣ ಸಹೋದರ ಪರ್ವೇಜ್ ಹೊರಹಾಕಿದ್ದಾರೆ.
ಹಂತಕರಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಲಾಗುತ್ತಿದ್ದು, ನಮಗೆ ಆತಂಕ ಮೂಡಿಸಿದೆ ಎಂದು ಪರ್ವೇಜ್ ಜೈಲು ವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಫೈರೋಜನ ಹಂತಕರು ಜೈಲಿನ ಒಳಗಡೆ ಕುಳಿತು, ಮೊಬೈಲ್ ಮೂಲಕ ಭಯದ ಸಂದೇಶ ರವಾನೆ ಮಾಡುತ್ತಿದ್ದು, ಹಂತಕರನ್ನು ಬೇರೆ ಬೇರೆ ಜೈಲುಗಳಿಗೆ ವರ್ಗ ಮಾಡುವಂತೆ ಆಗ್ರಹಿಸಿದ್ದಾರೆ.
Author: Karnataka Files
Post Views: 871




