Download Our App

Follow us

Home » ಕಾನೂನು » ಧಾರವಾಡ : ಫೈರೋಜ್ ಕೊಲೆ ನಂತರ ಇದೀಗ ಅಬ್ದುಲ್ ದೇಸಾಯಿ ಕೊಲೆಗೆ ಸ್ಕೆಚ್ ಅಂತೆ !

ಧಾರವಾಡ : ಫೈರೋಜ್ ಕೊಲೆ ನಂತರ ಇದೀಗ ಅಬ್ದುಲ್ ದೇಸಾಯಿ ಕೊಲೆಗೆ ಸ್ಕೆಚ್ ಅಂತೆ !

ಧಾರವಾಡ, ಇದೇ ವರ್ಷದ ಏಪ್ರಿಲ್ 10 ರಂದು ಭಯಾನಕ ಕೊಲೆಗೆ ಸಾಕ್ಷಿಯಾಗಿತ್ತು.

ಯುವ ಕಾಂಗ್ರೇಸ್ ಮುಖಂಡ ಫೈರೋಜ್ ಪಠಾಣರನ್ನು, ಆತನ ತಾಯಿಯ ಎದುರೆ ದುಷ್ಕರ್ಮಿಗಳು ನಿರ್ಧಯವಾಗಿ ಕೊಂದು ಹಾಕಿದ್ದರು.

ಇದು ಧಾರವಾಡ ಜಿಲ್ಲೆಯಲ್ಲಿ ಅಷ್ಟೇ ಅಲ್ಲ ರಾಜ್ಯದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ರಾಜಕೀಯ ದ್ವೇಷಕ್ಕೆ ಫೈರೋಜ್ ನ ಹೆಣ ಬಿತ್ತು ಅನ್ನೋದು ಅವತ್ತೇ ಗೊತ್ತಾಗಿತ್ತು.

ನಮ್ಮನ್ನು ಸಾಯಿಸ್ತಾರೆ ನಮಗೆ ರಕ್ಷಣೆ ಕೊಡಿ ಎಂದು ಸಾಯುವ ನಾಲ್ಕು ತಿಂಗಳ ಮುನ್ನ   ಫೈರೋಜ್ ಪಠಾಣ, ಪೊಲೀಸ್ ಕಮಿಷನರ್ ಕಚೇರಿಗೆ ಹೋಗಿ ಮನವಿ ಮಾಡಿ ಬಂದಿದ್ದರು. ಫೈರೋಜ್ ಜೊತೆಗೆ ಅಬ್ದುಲ್ ದೇಸಾಯಿಯ ಸಹ ಹೋಗಿದ್ದರು.

ಸಿಸಿಬಿ ಅಧಿಕಾರಿಗಳು ಅವತ್ತೇ ಅಲರ್ಟ್ ಆಗಿದ್ದರೆ, ಫೈರೋಜ್ ಉಳಿಯುತ್ತಿದ್ದ ಅನ್ನೋದನ್ನ, ಧಾರವಾಡ ಜನ ಇವತ್ತಿಗೂ ಮಾತನಾಡುತ್ತಾರೆ. ಆದ್ರೆ ಖಾಕಿ ಬಟ್ಟೆ ಹಾಕಿಕೊಂಡು ವ್ಯವಹಾರಕ್ಕೆ ನಿಂತಿದ್ದ ಅಧಿಕಾರಿಗಳು ಹೆಣ ಬಿದ್ದ ಮೇಲೆ ಬರುವಂತಾಯಿತು ಅನ್ನೋ ಬೇಸರದ ಮಾತುಗಳು ಫೈರೋಜ್ ಫ್ಯಾಮಿಲಿಯ ಆಕ್ರೋಶಕ್ಕೆ ಸಾಕ್ಷಿಯಾಗಿವೆ.

ಫೈರೋಜನ ಕೊಲೆ ನಡೆದ ಬಳಿಕ ಹಂತಕರ ಹೆಡೆಮುರಿಗೆ ಕಟ್ಟಿದ ಪೊಲೀಸ್ ವಿಶೇಷ ತಂಡ, ತನಿಖೆಗೆ ಇಳಿದಾಗ ಒಂದೊಂದೆ ರೋಚಕ ಮಾಹಿತಿಯನ್ನು ಸಂಗ್ರಹಿಸಿತು.

ಅಷ್ಟೊತ್ತಿಗೆ ಫೈರೋಜ್ ನ ಕೊಲೆಯಲ್ಲಿ ಅಂಜುಮನ್ ಇಸ್ಲಾಮ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿತ್ತು. ಸ್ವತಃ ಇಸ್ಮಾಯಿಲ್ ತಮಟಗಾರ ಮಾತನಾಡಿದ ಆಡಿಯೋ ವೈರಲ್ ಆಗಿದ್ದು, ಸಹಜವಾಗಿ ಈ ಕೊಲೆಗೆ ಬಲವಾದ ಸಾಕ್ಷ್ಯ ಒದಗಿಸಿತು. 

ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಇಸ್ಮಾಯಿಲ್ ತಮಟಗಾರಗೆ ನೋಟಿಸ್ ನೀಡಿದ್ದರು. ಆದರೆ ಅವರು ವಿಚಾರಣೆಗೆ ಈ ವರೆಗೂ ಬರದೇ ಇರೋದರಿಂದ, ಜನರಲ್ಲಿ ಮತ್ತು ಅವರ ಕುಟುಂಬದಲ್ಲಿ ಮತ್ತಷ್ಟು ಶಂಕೆ ವ್ಯಕ್ತವಾಗುತ್ತಿದೆ. 

ಇಂದು ಪತ್ರಿಕಾಗೋಷ್ಟಿ ನಡೆಸಿದ ಫೈರೋಜನ ತಾಯಿ, ಸಹೋದರ, ಸಹೋದರಿ, ಫೈರೋಜ ನ ಸಾವಿಗೆ ಎಂದು ನ್ಯಾಯ ಕೊಡ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಕೊಲೆಯಲ್ಲಿ ಪ್ರಮುಖ ಆರೋಪಿಯಾಗಿದ್ದಾರೆಂದು ಆರೋಪಿಸಲಾಗುವ ಇಸ್ಮಾಯಿಲ್  ತಮಟಗಾರ ಬಂಧನ ಯಾವಾಗ ಎಂದು ಕೇಳುತ್ತಿದ್ದಾರೆ.

ಫೈರೋಜ್ ನಂತರ ಅಬ್ದುಲ್ ದೇಸಾಯಿ ಕೊಲೆಗೆ ಸ್ಕೆಚ್ ! 

ಫೈರೋಜ್ ಪಠಾಣ ಕೊಲೆಯಾದ ನಂತರ ಇದೀಗ ಆತನ ಪ್ರಾಣ ಸ್ನೇಹಿತ ಅಬ್ದುಲ್ ದೇಸಾಯಿ ಕೊಲೆಗೆ ಸ್ಕೆಚ್ ಹಾಕಲಾಗಿದೆ. ಫೈರೋಜ್ ನಂತೆಯೇ ಅಬ್ದುಲ್ ದೇಸಾಯಿ ಕೊಲೆಯಾಗಲಿದ್ದಾನೆ ಅನ್ನೋ ವಿಷಯ ಗಮನಕ್ಕೆ ಬಂದಿದೆ. ಅಬ್ದುಲ್ ದೇಸಾಯಿಗೆ ರಕ್ಷಣೆ ಕೊಡಬೇಕು ಎಂದು ಮೃತ ಫೈರೋಜ್ ಫ್ಯಾಮಿಲಿ ಆಗ್ರಹಿಸಿದೆ. 

 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಗೆ ಮರ್ಯಾದೆ ತಂದು ಕೊಟ್ಟ ಅಬ್ದುಲ್ ಕಾಕರ

ಧಾರವಾಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಹೆಡ್ ಕಾನ್ಸ್ಟೇಬಲ್ ಅಬ್ದುಲ್ ಕಾಕರ, ಇಲಾಖೆಯ ಮಾನ ಹೆಚ್ಚಿಸುತ್ತ ಬಂದಿದ್ದಾರೆ. ಸಧ್ಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ

Live Cricket

error: Content is protected !!