Download Our App

Follow us

Home » ರಾಜಕೀಯ » ಎನ್ ಎಚ್ ಕೋನರೆಡ್ಡಿ ಮಂತ್ರಿಯಾಗಲು ಅದೊಂದೆ ಅಡ್ಡಿ !

ಎನ್ ಎಚ್ ಕೋನರೆಡ್ಡಿ ಮಂತ್ರಿಯಾಗಲು ಅದೊಂದೆ ಅಡ್ಡಿ !

ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿಯವರನ್ನು ಮಂತ್ರಿ ಮಾಡಬೇಕೆಂದು ಆಗ್ರಹಿಸಿ  ನವಲಗುಂದದಲ್ಲಿ ಪ್ರತಿಭಟನೆ ನಡೆದಿದೆ.

ಪ್ರತಿಭಟನೆಯಲ್ಲಿ ಸೇರಿದ್ದ ಸಂಖ್ಯೆ ಗಮನಿಸಿದ್ರೆ, ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಚಕ್ಕಡಿ ರಸ್ತೆ, ಹರಿಕಾರನಿಗೆ ಮಂತ್ರಿ ಮಾಡಿ ಎಂದು ಅವರ ಬೆಂಬಲಿಗರು ಆಗ್ರಹವನ್ನೇನು ಮಾಡಿದ್ದಾರೆ.

ಆದರೆ  ಮಂತ್ರಿಯಾಗಲು ಅದೊಂದೆ ಅಡ್ಡಿ 

ಜನತಾದಳದಿಂದ ಒಮ್ಮೆ ಶಾಸಕನಾಗಿ ನಂತರ ಕಾಂಗ್ರೇಸ್ ಸೇರಿದ್ದ ಎನ್ ಎಚ್ ಕೋನರೆಡ್ಡಿ, ಮಂತ್ರಿಯಾಗಲು ಅವರ ಜಾತಿ ಅಡ್ಡಿಯಾಗಿದೆ.

ಹೇಗೆ ಅಂತಾ ನೋಡೋದಾದ್ರೆ 

ರಾಮಲಿಂಗ ರೆಡ್ಡಿ – ಬಿಟಿಎಂ ಲೇಔಟ್

ಎನ್.ಎಚ್. ಶಿವಶಂಕರ ರೆಡ್ಡಿ – ಗೌರಿಬಿದನೂರು

ಎಸ್.ಎನ್. ಸುಬ್ಬಾರೆಡ್ಡಿ – ಬಾಗೇಪಲ್ಲಿ

ಡಾ. ಎಂ.ಸಿ. ಸುಧಾಕರ್ – ಚಿಂತಾಮಣಿ

ನಾರಾ ಭರತ್ ರೆಡ್ಡಿ – ಬಳ್ಳಾರಿ ನಗರ

ಎಚ್ ಕೆ ಪಾಟೀಲ – ಗದಗ

ಜೆ ಎಸ್ ಪಾಟೀಲ – ರೋಣ

ಬಸವರಾಜ ರಾಯರೆಡ್ಡಿ – ಯಲಬುರ್ಗಾ

ಜೆ ಟಿ ಪಾಟೀಲ – ಬೀಳಗಿ

ಸಿ ಎಸ್ ನಾಡಗೌಡ – ಮುದ್ದೇಬಿಹಾಳ

ಪ್ರಕಾಶ ಕೋಳಿವಾಡ – ರಾಣೇಬೆನ್ನೂರ ನಿಂದ ಕಾಂಗ್ರೇಸ್ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರೆಲ್ಲರು ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಹೀಗಿರುವಾಗ ಜಾತಿ ಲೆಕ್ಕಾಚಾರದಲ್ಲಿ ನೋಡುವದಾದರೆ ಸಧ್ಯ ರಾಮಲಿಂಗಾರೆಡ್ಡಿ ಸಚಿವರಾಗಿದ್ದಾರೆ. ಅತ್ಯಂತ ಹಿರಿಯ ನಾಯಕ ಎಚ್ ಕೆ ಪಾಟೀಲ ಹಾಗೂ ಸಿ ಎಸ್ ನಾಡಗೌಡ ಕಾಂಗ್ರೇಸ್ಸಿನಲ್ಲಿ  ಹಿರಿತನ ಹೊಂದಿದ್ದಾರೆ. 

ಈ ಕಾರಣಕ್ಕೆ ಶಾಸಕ ಎನ್ ಎಚ್ ಕೋನರೆಡ್ಡಿ ಮಂತ್ರಿಯಾಗುವದಕ್ಕೆ ಅಡ್ಡಿಯಾಗಿದೆ. ಅದಕ್ಕೆ ಎನ್ ಎಚ್ ಕೋನರೆಡ್ಡಿಯವರು ಜಾತಿ ಲೆಕ್ಕಾಚಾರದ ಬದಲು ರೈತ ಕೋಟಾ ಅಡಿಯಲ್ಲಿ ಸಚಿವ ಸ್ಥಾನ ಕೊಡಿ ಅಂತಾ ಹೇಳಿದ್ದಾರೆ. ಅದು ಆಗದ ಮಾತು ಅನ್ನೋದು ಕಾಂಗ್ರೇಸ್ಸಿಗರ ಮಾತಾಗಿದೆ.

 

 

 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!