Download Our App

Follow us

Home » ಕಾನೂನು » ನಿಮ್ಮ ಮುಂದಿನ ಪಯಣ ಮತ್ತಷ್ಟು ಯಶಸ್ವಿಯಾಗಲಿ

ನಿಮ್ಮ ಮುಂದಿನ ಪಯಣ ಮತ್ತಷ್ಟು ಯಶಸ್ವಿಯಾಗಲಿ

ಎನ್ ಶಶಿಕುಮಾರ ಹುಬ್ಬಳ್ಳಿಗೆ ಕಮಿಷನರ್ ಆಗಿ ಬಂದಂತ ಸಮಯದಲ್ಲಿ ಅನೇಕ ಸವಾಲುಗಳು ಅವರ ಬೆನ್ನಿಗೇರಿದ್ದವು. 

ಅವರ ಬಗ್ಗೆ, ಅವರ ಕೆಲಸದ ಸ್ಟೈಲ್ ಬಗ್ಗೆ, ಅವರು ಅಧಿಕಾರ ಸ್ವೀಕರಿಸುವದಕ್ಕೂ ಮುನ್ನ ಹುಬ್ಬಳ್ಳಿ ಧಾರವಾಡದಲ್ಲಿ ಚರ್ಚೆಗಳು ಆರಂಭವಾಗಿದ್ದವು

ಹೇಳಿ ಕೇಳಿ, ಹುಬ್ಬಳ್ಳಿ ಛೋಟಾ ಮುಂಬಯಿ ಎಂದು ಹೆಸರಾಗಿದ್ದರೆ, ಧಾರವಾಡ ವಿದ್ಯಾನಗರಿಯ ಪಟ್ಟ ಕಟ್ಟಿಕೊಂಡಿತ್ತು.

ಅವಳಿ ನಗರಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವದರ ಜೊತೆಗೆ ಜನರಿಗೆ ಸುರಕ್ಷತೆ ನೀಡುವದು ಸವಾಲಿನ ಕೆಲಸವಾಗಿತ್ತು.

ಹಿಂದೆ ಇದ್ದ ಕಮಿಷನರ್ ಗಳು ಉತ್ತಮ ರೀತಿಯಲ್ಲಿಯೇ ಕೆಲಸ ಮಾಡಿ ಜನಮೆಚ್ಚುಗೆ ಗಳಿಸಿದ್ದರು

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ಹುಟ್ಟಿಕೊಂಡಾಗಿನಿಂದಲೂ, ದಕ್ಷ ಅಧಿಕಾರಿಗಳು ಇಲ್ಲಿ ಸೇವೆ ಸಲ್ಲಿಸಿ ಹೋಗಿದ್ದರು

ಬೆಂಗಳೂರು ಹೊರತುಪಡಿಸಿದರೆ, ಹುಬ್ಬಳ್ಳಿ ಧಾರವಾಡ ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತ ಬಂತು

ನಾಗರಿಕರಿಗೆ ಉತ್ತಮ ಆಡಳಿತ, ಸುರಕ್ಷಿತ ವಾತಾವರಣ ಎನ್ ಶಶಿಕುಮಾರ ಅವರ ಹೆಗಲಿಗೇರಿತ್ತು.

ಎನ್ ಶಶಿಕುಮಾರ ಅವರು ಇದೆಲ್ಲವನ್ನು ಇದ್ದಷ್ಟು ದಿನ ಸಮರ್ಥವಾಗಿ ನಿಭಾಯಿಸಿದರು

ಅಪರಾಧಿಕ ಚಟುವಟಿಕೆಯಲ್ಲಿ ಭಾಗವಹಿಸಿದವರ ಮೇಲೆ ಕಾಲಿಗೆ ಗುಂಡು ಹಾಕಲು ಆರಂಭಿಸಿದ ಮೇಲೆ ಕ್ರೈಮ್ ಸ್ವಲ್ಪ ಮಟ್ಟಿಗೆ ಕಮ್ಮಿಯಾಯ್ತು ಆದರೆ, ಅಲ್ಲೊಂದು ಇಲ್ಲೊಂದು ಕ್ರೈಮ್ ಗಳು ನಡೆಯುತ್ತಲೆ ಬಂದವು. ಅದನ್ನು ಅತೀ ಶೀಘ್ರದಲ್ಲಿ ಪತ್ತೆ ಹಚ್ಚಿ ಹತ್ತಿಕ್ಕಿದರು

ಇಷ್ಟು ದಿನ ಮಹಾನಗರದ ಪೊಲೀಸ್ ಆಯುಕ್ತರಾಗಿದ್ದ ಎನ್ ಶಶಿಕುಮಾರ ಅವರ ಸ್ಥಾನಕ್ಕೆ ಮತ್ತೊಬ್ಬ ಸೂಪರ್ ಕಾಪ್ ಅಧಿಕಾರಿ ಪೊಲೀಸ್ ಆಯುಕ್ತರಾಗಿ ಬಂದಿದ್ದಾರೆ

ಎನ್ ಶಶಿಕುಮಾರ ಅವರು ಪೊಲೀಸ್ ಆಯುಕ್ತರಾಗಿದ್ದ ಸಮಯದಲ್ಲಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ಅವರ ಮುಂದಿನ ಪಯಣ ಯಶಸ್ವಿಯಾಗಲಿ.

ಹೊಸದಾಗಿ ಬಂದಿರುವ ಪೊಲೀಸ್ ಆಯುಕ್ತ ಬೊರಸೆ ಅವರು, ಅವರ ಆಡಳಿತದಿಂದ ಅವಳಿ ನಗರಕ್ಕೆಭೂಷಣವಾಗಲಿ.

ಮುಸ್ತಫಾ ಕುನ್ನಿಭಾವಿ

 

 

 

 

 

 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿಮ್ಮ ಮುಂದಿನ ಪಯಣ ಮತ್ತಷ್ಟು ಯಶಸ್ವಿಯಾಗಲಿ

ಎನ್ ಶಶಿಕುಮಾರ ಹುಬ್ಬಳ್ಳಿಗೆ ಕಮಿಷನರ್ ಆಗಿ ಬಂದಂತ ಸಮಯದಲ್ಲಿ ಅನೇಕ ಸವಾಲುಗಳು ಅವರ ಬೆನ್ನಿಗೇರಿದ್ದವು.  ಅವರ ಬಗ್ಗೆ, ಅವರ ಕೆಲಸದ ಸ್ಟೈಲ್ ಬಗ್ಗೆ, ಅವರು ಅಧಿಕಾರ ಸ್ವೀಕರಿಸುವದಕ್ಕೂ

Live Cricket

error: Content is protected !!