Download Our App

Follow us

Home » ಕಾನೂನು » ಮರ್ಯಾದಾ ಹತ್ಯೆ ಪ್ರಕರಣ : ಜಿಲ್ಲಾಡಳಿತ ವಿಫಲ ಎಂದ ಶಾಸಕ ಪ್ರಸಾದ ಅಬ್ಬಯ್ಯ

ಮರ್ಯಾದಾ ಹತ್ಯೆ ಪ್ರಕರಣ : ಜಿಲ್ಲಾಡಳಿತ ವಿಫಲ ಎಂದ ಶಾಸಕ ಪ್ರಸಾದ ಅಬ್ಬಯ್ಯ

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರದಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣ ರಾಜ್ಯದಾಧ್ಯಂತ ಕಿಡಿ ಹೊತ್ತಿಸಿದೆ. ಅಮಾನುಷ ಕೃತ್ಯಕ್ಕೆ ಎಲ್ಲೆಡೆ ಕಟು ಶಬ್ದಗಳಲ್ಲಿ ಖಂಡಿಸಲಾಗುತ್ತಿದೆ.

ಮರ್ಯಾದಾ ಹತ್ಯೆ ಪ್ರಕರಣ,  ನಾಗರಿಕ ಸಮಾಜವನ್ನು ತಲ್ಲಣಗೊಳಿಸಿದೆ. ಇದೊಂದು ಹೇಯ ಕೃತ್ಯ ಎಂದು ಹುಬ್ಬಳ್ಳಿ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ. ಈ ಪ್ರಕರಣದಿಂದ ಮನುಷ್ಯ ಸತ್ತು ಹೋಗಿದೆ ಎಂದು ಟೀಕಿಸಿದ್ದಾರೆ.

ಕೆಳಜಾತಿಯ ಯುವಕ ತನ್ನ ಮಗಳನ್ನು ಮದುವೆಯಾದ ಕಾರಣಕ್ಕೆ ಮಗಳನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕಾಶಗೌಡ ಪಾಟೀಲ ಬದುಕಲು ಸಹ ನಾಲಾಯಕ ಎಂದು ಕಿಡಿಕಾರಿದ್ದಾರೆ.

ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಪ್ರಕರಣಕ್ಕೆ ಸಂಬಂದಿಸಿದಂತೆ ಧಾರವಾಡ ಜಿಲ್ಲಾಡಳಿತ ವಿಫಲವಾಗಿದೆ ಎಂದು ಶಾಸಕ ಅಬ್ಬಯ್ಯ ಆರೋಪಿಸಿದ್ದಾರೆ. ಈ ಕುರಿತು ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡುವದಾಗಿ ಹೇಳಿದ ಅಬ್ಬಯ್ಯ, ಪ್ರಸಂಗ ಬಿದ್ದರೆ, ಜಿಲ್ಲಾಧಿಕಾರಿಗಳ ಮೇಲೆಯೂ ಕ್ರಮಕ್ಕೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

Karnataka Files
Author: Karnataka Files

Leave a Comment

RELATED LATEST NEWS

error: Content is protected !!