Download Our App

Follow us

Home » ಭಾರತ » ಮದುವೆಯಾದ 24 ಗಂಟೆಗಳಲ್ಲಿ ವಿಚ್ಛೇದನ

ಮದುವೆಯಾದ 24 ಗಂಟೆಗಳಲ್ಲಿ ವಿಚ್ಛೇದನ

ಪುಣೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆಯಾದ ಕೇವಲ 24 ಗಂಟೆಗಳ ನಂತರ ನವವಿವಾಹಿತ ಜೋಡಿ ಬೇರ್ಪಡಲು ನಿರ್ಧರಿಸಿದೆ.

ಮದುವೆಯಾದ ಕೂಡಲೇ ಇಬ್ಬರ ನಡುವೆ ಗಂಭೀರವಾದ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡ್ಡಿದ್ದರ ಪರಿಣಾಮ ವಿಚ್ಚೇದನ ನಡೆದಿದೆ. ಪರಸ್ಪರ ಒಪ್ಪಿಗೆಯ ಮೂಲಕ ತಮ್ಮ ಮದುವೆಯನ್ನು ಕೊನೆಗೊಳಿಸಿದ್ದಾರೆ. ಇದು ದೇಶಾದ್ಯಂತ ಚರ್ಚೆಗೆ ನಾಂದಿ ಹಾಡಿದೆ.

ವಕೀಲೆ ರಾಣಿ ಸೋನಾವಾನೆ ಅವರ ಪ್ರಕಾರ, ಪತಿ ಮತ್ತು ಪತ್ನಿಯ ನಡುವಿನ ಭಿನ್ನಾಭಿಪ್ರಾಯಗಳು ತುಂಬಾ ಆಳವಾಗಿದ್ದರಿಂದ ಅವರು ಮದುವೆಯನ್ನು ತಕ್ಷಣವೇ ಕೊನೆಗೊಳಿಸಲು ನಿರ್ಧರಿಸಿದರು ಎನ್ನಲಾಗಿದೆ.

ಈ ಪ್ರಕರಣದಲ್ಲಿ ಯಾವುದೇ ಹಿಂಸಾಚಾರ ಅಥವಾ ಅಪರಾಧ ಚಟುವಟಿಕೆಯ ಆರೋಪಗಳಿಲ್ಲದಿದ್ದರು, ದಂಪತಿಗಳು ಕಾನೂನು ಪ್ರಕ್ರಿಯೆಯನ್ನು ಅನುಸರಿಸಿ ಶಾಂತಿಯುತವಾಗಿ ಮತ್ತು ಪರಸ್ಪರ ಒಪ್ಪಿಗೆಯ ಮೂಲಕ ತಮ್ಮ ಮದುವೆಯನ್ನು ಕೊನೆಗೊಳಿಸಿದ್ದಾರೆ.

ಆ ಮಹಿಳೆ ವೃತ್ತಿಯಲ್ಲಿ ವೈದ್ಯೆ, ಮತ್ತು ಆ ವ್ಯಕ್ತಿ ಹಡಗಿನಲ್ಲಿ ಕೆಲಸ ಮಾಡುವ ಎಂಜಿನಿಯರ್ ಆಗಿದ್ದ. ಮದುವೆಯ ನಂತರ, ಪತಿ ತನ್ನ ಹೆಂಡತಿಗೆ ತನ್ನನ್ನು ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ನಿಯೋಜಿಸಬಹುದು ಈ ಬಗ್ಗೆ ತನಗೆ ಯಾವುದೇ ಖಚಿತತೆ ಇಲ್ಲ ಎಂದು ಹೇಳಿದ್ದಾನೆ. ಇದೇ ಇಬ್ಬರು ಬೇರ್ಪಡಲು ಕಾರಣವಾಯ್ತು ಎನ್ನಲಾಗಿದೆ.

ಮದುವೆಗೂ ಮುಂಚೆ ಎರಡು ವರ್ಷಗಳ ಕಾಲ ಇಬ್ಬರ ನಡುವೆ ಸಂಬಂಧವಿತ್ತು. ಆವಾಗಲೇ ಈ ನಿರ್ಣಾಯಕ ವಿಷಯವನ್ನು ಏಕೆ ಚರ್ಚಿಸಲಿಲ್ಲ ಎಂದು ವಕೀಲೆ ಸೋನಾವಾನೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!