Download Our App

Follow us

Home » ಜೀವನಶೈಲಿ » ಶಿಲ್ಪಕಲೆಯ ತೊಟ್ಟಿಲು ಲಕ್ಕುಂಡಿ ಗ್ರಾಮದಲ್ಲಿ ಚಾಲುಕ್ಯರ ಕಾಲದ ಚಿನ್ನದ ಆಭರಣ ಪತ್ತೆ

ಶಿಲ್ಪಕಲೆಯ ತೊಟ್ಟಿಲು ಲಕ್ಕುಂಡಿ ಗ್ರಾಮದಲ್ಲಿ ಚಾಲುಕ್ಯರ ಕಾಲದ ಚಿನ್ನದ ಆಭರಣ ಪತ್ತೆ

ರಾಷ್ಟ್ರಕೂಟರು ಹಾಗೂ ಚಾಲುಕ್ಯರು ಆಳಿದ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಹಳೆಯ ಕಾಲದ ಚಿನ್ನದ ಆಭರಣಗಳು ಪತ್ತೆಯಾಗಿವೆ.

ಶಿಲ್ಪಕಲೆಯ ತೊಟ್ಟಿಲು, ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಚಿನ್ನ ತುಂಬಿದ್ದ ಚೆಂಬು ಪತ್ತೆಯಾಗಿದ್ದು, ಕುತೂಹಲ ಮೂಡಿಸಿದೆ.

ಕಸ್ತೂರೆವ್ವ ರಿತ್ತಿ ಎನ್ನುವವರ ಮನೆಯ ಅಡಿಪಾಯ ತೆಗೆಯುವ ಸಂಧರ್ಭದಲ್ಲಿ ತಾಮ್ರದ ಚೆಂಬು ಸಿಕ್ಕಿದ್ದು, ಅದರೊಳಗೆ ಅಪರೂಪದ ಪುರಾತನ ಕಾಲದ ಚಿನ್ನದ ಆಭರಣ ಸಿಕ್ಕಿವೆ. 

 

 

ಸಿಕ್ಕ ಬಂಗಾರದ ಬಗ್ಗೆ 8 ವರ್ಷದ ಪ್ರಜ್ವಲ್ ರಿತ್ತಿ ಎಂಬ ಬಾಲಕ ಪ್ರಾಮಾಣಿಕವಾಗಿ ಊರಿನವರ ಹತ್ತಿರ ಈ ವಿಷಯ ತಿಳಿಸಿದ್ದು ಪ್ರಸಂಸೆಗೆ ಕಾರಣವಾಗಿದೆ. 

ಚೈನ್, ಬಳೆ, ರಿಂಗ್ ಆಕಾರದ 22 ಚಿನ್ಮಾಭರಣ ಪತ್ತೆಯಾಗಿವೆ. ಒಟ್ಟು 460 ರಿಂದ 470 ಗ್ರಾಂ ವರೆಗೆ ಚಿನ್ನ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರ ಬೆಲೆ ಒಟ್ಟು ಅಂದಾಜು 60 ರಿಂದ 65 ಲಕ್ಷ ರೂಪಾಯಿ ಆಗಬಹುದು ಎನ್ನಲಾಗಿದೆ. 

ಪೊಲೀಸರ ಸಮ್ಮುಖದಲ್ಲಿ ತಹಶೀಲ್ದಾರ್ ಅವರಿಗೆ ಚಿನ್ನಾಭರಣ ಹಸ್ತಾಂತರ ಮಾಡಲಾಗಿದೆ.

ದೇವಾಲಯಗಳ ಸ್ವರ್ಗ, ಶಿಲ್ಪ ಕಲೆಯ ತೊಟ್ಟಿಲು ಎಂಬ ಖ್ಯಾತಿ ಹೊಂದಿರುವ ಲಕ್ಕುಂಡಿ, ಕಲ್ಯಾಣ ಚಾಲುಕ್ಯರ ಕಾಲದ ವಾಸ್ತು ಶಿಲ್ಪ ಹೊಂದಿದೆ.

ಈ ಗ್ರಾಮದಲ್ಲಿ 101 ದೇವಸ್ಥಾನ, 101 ಭಾವಿಗಳಿವೆ. ಸ್ಥಳಕ್ಕೆ ಜಿಲ್ಲಾಡಳಿತ ಧಾವಿಸಿದ್ದು, ಸಚಿವ ಎಚ್ ಕೆ ಪಾಟೀಲ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಹಿತಿ ಕಲೆ ಹಾಕಿ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!