Download Our App

Follow us

Home » ಭಾರತ » ಪಶ್ಚಿಮ ಪದವೀಧರ ಚುನಾವಣೆ ಕಾಂಗ್ರೇಸ್ ಸ್ಥಿತಿ ಅಯೋಮಯ : ಗೆಲ್ಲೋರುಗಿಂತ ಕೆಡವೋರೆ ಜಾಸ್ತಿ

ಪಶ್ಚಿಮ ಪದವೀಧರ ಚುನಾವಣೆ ಕಾಂಗ್ರೇಸ್ ಸ್ಥಿತಿ ಅಯೋಮಯ : ಗೆಲ್ಲೋರುಗಿಂತ ಕೆಡವೋರೆ ಜಾಸ್ತಿ

ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಯನ್ನೋಳಗೊಂಡ ಪಶ್ಚಿಮ ಪದವೀಧರ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ.

ಕಾಂಗ್ರೇಸ್ ಅಭ್ಯರ್ಥಿಯಾಗಿ ಮೋಹನ ಲಿಂಬಿಕಾಯಿಯವರ ಹೆಸರು ಘೋಷಣೆಯಾಗುತ್ತಿದ್ದಂತೆ ಅಪಸ್ವರ, ಅಸಮಾಧಾನ ಕೇಳಿ ಬಂದಿದೆ.

ಮೂಲ ಕಾಂಗ್ರೇಸ್ಸಿನಲ್ಲಿ ಸಾಕಷ್ಟು ಪ್ರಭಲ ಅಭ್ಯರ್ಥಿಗಳಿದ್ದರು. ವಲಸೆ ಬಂದಿರುವವರಿಗೆ ಪಕ್ಷ ಮಣೆ ಹಾಕಿದೆ ಎಂಬ ಬೇಸರ ಪಕ್ಷದಲ್ಲಿ ವ್ಯಕ್ತವಾಗಿದೆ.

ಪಕ್ಷ ಅಧಿಕಾರದಲ್ಲಿ ಇರದೇ ಇದ್ದಾಗ, ಪಕ್ಷ ಸಂಘಟನೆ ಬಲಿಷ್ಟಗೊಳಿಸಿ ಸಾಕಷ್ಟು ಶ್ರಮ ಹಾಕಿದ್ದ ಕುಬೇರಪ್ಪ, ಈಗ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನನ್ನನ್ನು ಮರೆತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. 

ಲಿಂಗಾಯತ ಲಾಭಿ ಕೆಲಸ ಮಾಡಿದೆ ಎಂಬ ಮಾತು ಕೇಳಿ ಬಂದಿದ್ದು, ಪಕ್ಷದ ಅಭ್ಯರ್ಥಿ ಗೆಲ್ಲೋದಕ್ಕಿಂತ ಕೆಡವೋರೆ ಜಾಸ್ತಿಯಾಗಿದ್ದಾರೆ.

ಟಿಕೇಟ ಆಕಾಂಕ್ಷಿಗಳಾಗಿದ್ದ   ಬಸವರಾಜ ಗುರಿಕಾರ, ಆರ್ ಎಮ್ ಕುಬೇರಪ್ಪ, ಸೋನೆಖಾನ ಸೇರಿದಂತೆ ಹಲವರು ಸಭೆ ಮಾಡಿದ್ದು, ಘೋಷಿತ ಅಭ್ಯರ್ಥಿ ಬದಲಾವಣೆ ಮಾಡುವಂತೆ ಪಕ್ಷದ ನಾಯಕರಲ್ಲಿ ದುಂಬಾಲು ಬಿದ್ದಿದ್ದಾರೆ.

ಒಟ್ನಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೇಸ್ವಿಗೆ ಬಂಡಾಯದ ಸ್ಥಿತಿ ಎದುರಾಗಲಿದೆ ಎನ್ನಲಾಗಿದ್ದು, ಕಾಂಗ್ರೇಸ್ ಸ್ಥಿತಿ ಅಯೋಮಯವಾಗಿದೆ

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!