Download Our App

Follow us

Home » ಕಾನೂನು » ಬಳ್ಳಾರಿಯಲ್ಲಿ ಬೆಂಕಿ : ಜನಾರ್ಧನ ರೆಡ್ಡಿ, ಶ್ರೀರಾಮುಲು ಒಡೆತನದ ಮಾಡೆಲ್ ಹೌಸ್ ಗೆ ಬೆಂಕಿ

ಬಳ್ಳಾರಿಯಲ್ಲಿ ಬೆಂಕಿ : ಜನಾರ್ಧನ ರೆಡ್ಡಿ, ಶ್ರೀರಾಮುಲು ಒಡೆತನದ ಮಾಡೆಲ್ ಹೌಸ್ ಗೆ ಬೆಂಕಿ

ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ಮರೆಯುವ ಮುನ್ನವೇ ಜನಾರ್ದನ್​ ರೆಡ್ಡಿ ಹಾಗೂ ಮಾಜಿ ಸಚಿವ ಬಿ ಶ್ರೀರಾಮುಲು ಮಾಲೀಕತ್ವದ ಮಾಡೆಲ್​​ ಹೌಸ್ ಗೆ ಶುಕ್ರವಾರ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

ಬೆಂಕಿಯ ಕೆನ್ನಾಲಿಗೆಗೆ ಇಡೀ ಕಟ್ಟಡ ಧಗ ಧಗ ಹೊತ್ತಿ ಉರಿದಿದೆ.

ಬಳ್ಳಾರಿಯ ಕಂಟೋನ್​ಮೆಂಟ್​ ಬಳಿ ಇರುವ ಜನಾರ್ದನ್​​ ರೆಡ್ಡಿ ಮಾಲೀಕತ್ವದ ಜಿ ಸ್ಕೈರ್ ಲೇಔಟ್​ನಲ್ಲಿರುವ ಮಾಡೆಲ್​ ಹೌಸ್​ಗೆ ಬೆಂಕಿ ಬಿದ್ದಿದೆ.

ಘಟನೆಯ ಕುರಿತು ಜನಾರ್ಧನ ರೆಡ್ಡಿ ಸಹೋದರ, ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಶಾಸಕ ನಾರಾ ಭರತ ರೆಡ್ಡಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಶಾಸಕ ಭರತ ರೆಡ್ಡಿಯ ಬೆಂಬಲಿಗರು ಪೆಟ್ರೋಲ್ ಬಾಂಬ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುತ್ತಿದ್ದು, ಪೊಲೀಸರು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!