ಧಾರವಾಡ ಕ್ರಷಿ ವಿಶ್ವ ವಿದ್ಯಾಲಯದ ಕುಲಪತಿ ಪಿ ಎಲ್ ಪಾಟೀಲ ವಿರುದ್ಧ ಆಡಳಿತ ಮಂಡಳಿ ಸದಸ್ಯರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕುಲಪತಿಗಳಿಗೆ ರಾಜ್ಯಪಾಲರ ಕಚೇರಿಯಿಂದ ಪತ್ರ ಬಂದಿದೆ.
ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಅಕ್ರಮಗಳು ಮತ್ತು ಆಡಳಿತಾತ್ಮಕ ಲೋಪಗಳು” ಕುರಿತು ಪ್ಯಾರಾ-ವೈಸ್ ವಿವರಣೆಯನ್ನು ಪೋಷಕ ದಾಖಲೆಗಳೊಂದಿಗೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಆಡಳಿತ ಮಂಡಳಿ ಸದಸ್ಯರು ಧಾಖಲೆಯೊಂದಿಗೆ ಮಾಡಿರುವ ಆರೋಪದ ಕುರಿತು, ಪ್ರತಿಯೊಂದು ಆರೋಪಕ್ಕೆ ಸಂಬಂಧಿಸಿದಂತೆ ಸಮಗ್ರ ಉತ್ತರ ನೀಡುವಂತೆ ರಾಜ್ಯಪಾಲರ ಅಧೀನ ಕಾರ್ಯದರ್ಶಿಗಳು, ಕುಲಪತಿಗೆ ಪತ್ರ ಬರೆದು 7 ದಿನಗಳ ಒಳಗಾಗಿ ಉತ್ತರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
Author: Karnataka Files
Post Views: 638





