ಜನೆವರಿ 21 ರಂದು ತನ್ನ ಪ್ರೇಯಸಿಯನ್ನು ಕೊಲೆ ಮಾಡಿ ಧಾರವಾಡದ ಕೇಂದ್ರ ಕಾರಾಗೃಹದ ಪಾಲಾಗಿರುವ ಸಾಬೀರ್ ಮುಲ್ಲಾ ಎಂಬ ವಿಚಾರಣಾಧೀನ ಕೈದಿ ಇದೀಗ ಫಿನಾಯಿಲ್ ಕುಡಿದವರಂತೆ ನಾಟಕವಾಡಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಜನೆವರಿ 21 ರಂದು ವಿನಯ್ ಡೇರಿ ರಸ್ತೆ ಹತ್ತಿರ ಸಾಬೀರ್ ತನ್ನ ಪ್ರೇಯಸಿಯಾದ ಝಾಕಿಯಾ ಮುಲ್ಲಾ ಎಂಬಾಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ.
ಕೊಲೆ ಮಾಡಿದ ನಂತರ ತನಗೆ ಏನೂ ಗೊತ್ತಿಲ್ಲದವರಂತೆ ಅಲ್ಲೇ ಸುಳುದಾಡಿದ್ದ ಆರೋಪಿ ನಾಟಕವಾಡಿದ್ದ.
ಕೊನೆಗೆ ಪೊಲೀಸ್ ತನಿಖೆಯಿಂದ ಸಾಬೀರ್ ಕೊಲೆ ಪ್ರಕರಣದಲ್ಲಿ ಲಾಕ್ ಆಗಿ ಧಾರವಾಡದ ಕೇಂದ್ರ ಕಾರಾಗೃಹದ ಪಾಲಾಗಿದ್ದ ಸಾಬಿರ, ಪಿನಾಯಿಲ್ ಕುಡಿದು ಆತ್ಮಹತ್ಯೆಯ ನಾಟಕ ಮಾಡಿದ್ದಾನೆ.
ಕೇಂದ್ರ ಕಾರಾಗೃಹದಲ್ಲಿ ಈತನನ್ನು ಸಿಂಗಲ್ ಸೆಲ್‌ನಲ್ಲಿ ಇಡಲಾಗಿತ್ತು.ಆ ಸೆಲ್‌ನಿಂದ ಹೊರ ಬರಲು ಸಾಬೀರ್ ಇದೀಗ ಫಿನಾಯಿಲ್ ಕುಡಿದವರಂತೆ ನಾಟಕವಾಡಿದ್ದಾನೆ ಎನ್ನಲಾಗಿದೆ.
ಇದೀಗ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಧಾಖಲು ಮಾಡಲಾಗಿದೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.





