ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರನ್ನು ರಾಜಕೀಯವಾಗಿ ಮುಗಿಸಬೇಕೆಂಬ ಷಡ್ಯಂತ್ರ ಮಾಡಿದವರ ವಿರುದ್ಧ ನಾಳೆ ಧಾರವಾಡದಲ್ಲಿ ಮೌನ ಮೆರವಣಿಗೆ ನಡೆಯಲಿದೆ.
ಬೆಳಿಗ್ಗೆ 10 ಘಂಟೆಗೆ ಕಲಾಭವನದಿಂದ ಕೆಸಿಸಿ ಬ್ಯಾಂಕ್ ವರೆಗೆ ಮೌನ ಮೆರವಣಿಗೆ ನಡೆಯಲಿದೆ.
ಉತ್ತರ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದ ವಿನಯ ಕುಲಕರ್ಣಿಯವರನ್ನು ರಾಜಕೀಯವಾಗಿ ಬಗ್ಗು ಬಡಿಯಲು ಕೆಲವರು ಷಡ್ಯಂತ್ರ ಮಾಡಲಾಗಿದೆ.
ನ್ಯಾಯಾಲಯ ನೀಡಿರುವ ತೀರ್ಪಿಗೆ ತಲೆ ಬಾಗಿರುವ ವಿನಯ ಕುಲಕರ್ಣಿಯವರು, ಕಾನೂನು ಹೋರಾಟ ಮುಂದುವರಿಸಲಿದ್ದು, ನಾಳಿನ ಮೌನ ಮೆರವಣಿಗೆ ತೀರ್ಪಿನ ವಿರುದ್ಧವಲ್ಲ, ಬದಲಾಗಿ ರಾಜಕೀಯ ಷಡ್ಯಂತ್ರ ಮಾಡಿದವರ ವಿರುದ್ಧ ಮೌನ ಮೆರವಣಿಗೆ ನಡೆಯಲಿದೆ.
Author: Karnataka Files
Post Views: 235




