Download Our App

Follow us

Home » ಕಾನೂನು » ಧಾರವಾಡ ನಗರ ಈಗ ಗಾಂಜಾಮಯ. ಪೇಡೆಗಿಂತ ಗಾಂಜಾ ಭರ್ಜರಿ ಮಾರಾಟ

ಧಾರವಾಡ ನಗರ ಈಗ ಗಾಂಜಾಮಯ. ಪೇಡೆಗಿಂತ ಗಾಂಜಾ ಭರ್ಜರಿ ಮಾರಾಟ

ಧಾರವಾಡದಲ್ಲಿ ಎಲ್ಲಾದರು ನಿಂತು ಕಲ್ಲೇಸೆದರೆ, ಆ ಕಲ್ಲು ಒಬ್ಬ ಸಾಹಿತಿ, ಸಂಗೀತಗಾರನ ಮನೆ ಮೇಲೆ ಬೀಳುತ್ತದೆ ಎಂಬ ಮಾತು ಒಂದು ಕಾಲಕ್ಕೆ ಜನಜನಿತವಾಗಿತ್ತು.

ಆದ್ರೆ ಇದೀಗ ಕಾಲ ಬದಲಾಗಿದೆ. ಎಸೆಯುವ ಕಲ್ಲು ಗಾಂಜಾ ಗಿರಾಕಿಗಳ ಮೇಲೆ ಬೀಳುತ್ತದೆ ಅನ್ನೋ ಮಾತು ಇದೀಗ ಚಾಲ್ತಿಯಲ್ಲಿದೆ. 

ಸಾಂಸ್ಕೃತಿಕ ಹಾಗೂ ಸುಸಂಸ್ಕೃತ ನಗರ ಧಾರವಾಡ, ಇದೀಗ ಪೂರ್ಣ ಹದಗೆಟ್ಟಿದೆ. ಇಲ್ಲಿನ ವಾತಾವರಣ ಸಂಪೂರ್ಣ ಬದಲಾಗಿದೆ. 

ಧಾರವಾಡ ಇದೀಗ ಗಾಂಜಾಮಯವಾಗಿದೆ. ಧಾರವಾಡ ಪೇಡೆಗಿಂತ ಗಾಂಜಾ ಹೆಚ್ಚು ಮಾರಾಟವಾಗುತ್ತಿದೆ.

ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಯಸ್ಸಿಗೆ ಬಂದ ಹುಡುಗರ ಕೈಯಲ್ಲಿ ಮತ್ತು ಪ್ಯಾಂಟಿನ ಕಿಸೆಯಲ್ಲಿ ಗಾಂಜಾ ಚೀಟು ಕಂಡು ಬರುತ್ತಿದೆ. 

ಧಾರವಾಡದಲ್ಲಿ ನಡೆದ ಬಹುತೇಕ ಅಪರಾಧಗಳನ್ನು ನೋಡಿದಾಗ ಗಾಂಜಾ ನಶೆಯಲ್ಲಿ ಕೃತ್ಯ ಎಸಗಿರುವದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಧಾರವಾಡದ ಮೂರು ಠಾಣೆಗಳ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. 

ಮಕ್ಕಳು ಶಾಲಾ ಕಾಲೇಜಿಗೆ ಸುರಕ್ಷಿತವಾಗಿ ಹೋಗಿ ಬರ್ತಾರಾ ಅನ್ನೋ ಭಯದಲ್ಲಿ ಪಾಲಕರು ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳಿಸುವ ಪರಿಸ್ಥಿತಿ ಬಂದಿದೆ. 

ಧಾರವಾಡದ ಪರಿಸರ ಅಷ್ಟೊಂದು ಕೆಟ್ಟು ಹೋಗಿದೆ. ಇದೆಲ್ಲವನ್ನು ಸರಿ ಮಾಡಬೇಕು, ಗಾಂಜಾ ಮಟ್ಟ ಹಾಕಬೇಕು ಅಂದರೆ ಧನದಾಹಿ ಪೊಲೀಸ ಅಧಿಕಾರಿಗಳ ತಲೆದಂಡ ಆಗಬೇಕು.

ಆದರೆ ಇದೀಗ ಬರಿ ಪೊಲೀಸರನ್ನು ಮಾತ್ರ ಸಸ್ಪೆಂಡ್ ಮಾಡಿ ದೊಡ್ಡವರು ಬಚಾವಾಗುತ್ತಿದ್ದಾರೆ. ಕ್ರೈಮ್ ಬೀಟಿನ ಪೊಲೀಸರ ಪ್ರತ್ತೈಕ ತಂಡ ರಚನೆ ಮಾಡಿ, ಗಾಂಜಾ ಹತೋಟಿಗೆ ತರದೇ ಹೋದರೆ ಧಾರವಾಡ ಮತ್ತೊಂದು ಪಂಜಾಬ್ ಆಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!