ಧಾರವಾಡದ ಪ್ರಖ್ಯಾತ ರಾಮ್ ರಹೀಮ್ ಹಾಲಿನ ಡೈರಿ ಮಾಲೀಕ, ಹಾಗೂ ಮಾಜಿ ಕನಕೂರು ತಾಲೂಕು ಪಂಚಾಯಿತಿ ಸದಸ್ಯ, ಕವಲಗೇರಿ ಗ್ರಾಮದ ನಿವಾಸಿಯಾದ ಹಜರತ್ ಸಾಬ್ ಮಕ್ತುಂಸಾಬ್ ನದಾಫ್ ನಿಧನರಾಗಿದ್ದಾರೆ.
ಇವರು ರಾಮ ರಹೀಮ್ ಡೇರಿಯನ್ನು ಆರಂಭಿಸಿ ಡೇರಿಯನ್ನು ಎತ್ತರಕ್ಕೆ ಬೆಳೆಸಿದ್ದರು. ಇಂದಿಗೂ ರಾಮ ರಹೀಮ್ ಡೇರಿಯ ತುಪ್ಪ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಹೆಸರುವಾಸಿಯಾಗಿದೆ.
ರಾಮ ರಹೀಮ್ ಡೇರಿಯ ಮತ್ತೊಂದು ವಿಶೇಷ ಏನೆಂದರೆ ಅವರ ಅಂಗಡಿಯಲ್ಲಿ ಎಲ್ಲ ಧರ್ಮಿಯರ ಫೋಟೋಗಳನ್ನು ಹಾಕಲಾಗಿದೆ.
ಡೇರಿಯ ವ್ಯವಹಾರದ ಜೊತೆ ಸೌಹಾರ್ಧತೆಯ ಸೇತುವೆ ಬೆಸೆದಿದ್ದ ಹಜರತಸಾಬ್ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಮೃತರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ 10 ಘಂಟೆಗೆ ಕವಲಗೇರಿ ಗ್ರಾಮದಲ್ಲಿ ನಡೆಯಲಿದೆ
Author: Karnataka Files
Post Views: 826





