ಪ್ರತ್ತೈಕ ಪಾಲಿಕೆಗೆ ಆಗ್ರಹಿಸಿ ಧಾರವಾಡದಲ್ಲಿ ನಡೆದಿರುವ ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಸಾರ್ವಜನಿಕರಿಂದ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿದ್ದು, ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.
ಹೋರಾಟಗಾರರೊಂದಿಗೆ ತಮ್ಮನ್ನು ಭೇಟಿ ಮಾಡಲು ಅವಕಾಶ ನೀಡಬೇಕೆಂದು, ರಾಜ್ಯಪಾಲರಿಗೆ, ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರ ಪತ್ರಕ್ಕೆ ಲೋಕ ಭವನ ಓ ಕೆ ಎಂದಿದೆ.
ಪ್ರತ್ತೈಕ ಪಾಲಿಕೆಗೆ ಸಂಬಂಧಪಟ್ಟಂತೆ ರಾಜ್ಯಪಾಲರು ಅಂಕಿತ ಹಾಕಬೇಕಿದ್ದು, ನಾಳೆ ಸಂಜೆ 7 ಘಂಟೆಗೆ ಲೋಕ ಭವನದಲ್ಲಿ ಸಭೆ ನಿಗದಿಯಾಗಿದೆ.
5 ಜನ ಪ್ರಮುಖ ಹೋರಾಟಗಾರರನ್ನು, ಲೋಕ ಭವನದ ಅಧಿಕಾರಿಗಳು ಸಭೆಗೆ ಅಹ್ವಾನ ನೀಡಿದ್ದು, ಕೇಂದ್ರ ಸಚಿವರು ಭಾಗವಹಿಸುವ ನಿರೀಕ್ಷೆಯಿದೆ.

ಈಗಾಗಲೇ ರಾಜ್ಯ ಸರ್ಕಾರ ವಿನಯ ಕುಲಕರ್ಣಿಯವರ ಒತ್ತಡಕ್ಕೆ ಮಣಿದು, ಪ್ರತ್ತೈಕ್ ಪಾಲಿಕೆಗೆ ಹಸಿರು ನಿಶಾನೆ ತೋರಿದ್ದು, ರಾಜ್ಯಪಾಲರ ಅಂಕಿತ ಬಾಕಿ ಇದೆ.
ನಾಳೆ ಸಂಜೆ ರಾಜ್ಯಪಾಲರೊಂದಿಗೆ ನಡೆಯುವ ಸಭೆ ಕುತೂಹಲ ಮೂಡಿಸಿದ್ದು, ನಾಳೆ ರಾತ್ರಿ ಹೊತ್ತಿಗೆ ಶುಭ ಸೂಚನೆ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ.
ಪ್ರತ್ತೈಕ ಪಾಲಿಕೆಗಾಗಿ ನಾಲ್ಕು ದಿನಗಳಿಂದ ಸತ್ಯಾಗ್ರಹ ನಡೆದಿದ್ದರು, ಬಿಜೆಪಿಯ ಪಾಲಿಕೆ ಸದಸ್ಯರು ಭಾಗವಹಿಸದಿರುವದು ಆಕ್ರೋಶಕ್ಕೆ ಕಾರಣವಾಗಿದೆ.
ಬಿಜೆಪಿ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ರಾಜ್ಯಪಾಲರ ಕದ ತಟ್ಟಿದ್ದು, ರಾಜ್ಯಪಾಲರೊಂದಿಗೆ ನಾಳೆ ಸಂಜೆ ನಡೆಯುವ ಸಭೆಯತ್ತ ಎಲ್ಲರ ಚಿತ್ತ ನೆತ್ತಿದೆ.
ಹೈಕೋರ್ಟ್ ಪೀಠ ಹೋರಾಟದ ರೂವಾರಿ ಬಿ ಡಿ ಹಿರೇಮಠ, ಅತ್ಯುಗ್ರ ಹೋರಾಟದ ಮುನ್ಸೂಚನೆ ಕೊಟ್ಟ ನಂತರ ಬೆಳವಣಿಗೆಗಳು ತೀವ್ರಗೊಂಡಿವೆ.





