Download Our App

Follow us

Home » ಕಾನೂನು » ಧಾರವಾಡ : ಪ್ರತೈಕ್ ಪಾಲಿಕೆ ಹೋರಾಟ / ನಿನ್ನೆ ಬಿಜೆಪಿ, ಇಂದು ಕಾಂಗ್ರೇಸ್ ನಾಯಕರಿಂದ ರಾಜ್ಯಪಾಲರ ಭೇಟಿ

ಧಾರವಾಡ : ಪ್ರತೈಕ್ ಪಾಲಿಕೆ ಹೋರಾಟ / ನಿನ್ನೆ ಬಿಜೆಪಿ, ಇಂದು ಕಾಂಗ್ರೇಸ್ ನಾಯಕರಿಂದ ರಾಜ್ಯಪಾಲರ ಭೇಟಿ

ಧಾರವಾಡದಲ್ಲಿ ಪ್ರತ್ತೈಕ್ ಪಾಲಿಕೆಗೆ ನಡೆದ ಹೋರಾಟ ರಾಜಧಾನಿ ಬೆಂಗಳೂರಿನಲ್ಲಿ ಬಿಸಿ ಮುಟ್ಟಿಸಿದೆ.

ನಿನ್ನೆ ಬಿಜೆಪಿಯ ನಾಯಕರು ರಾಜ್ಯಪಾಲರು ಭೇಟಿ ಮಾಡಿದರೆ, ಇಂದು ಕಾಂಗ್ರೇಸ್ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ನೇತ್ರತ್ವದಲ್ಲಿ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ, ಕಾನೂನು ಅಭಿಪ್ರಾಯ ಪಡೆದು, ಆದಷ್ಟು ಶೀಘ್ರ ಅಂಕಿತ ಹಾಕುವಂತೆ ರಾಜ್ಯಪಾಲರನ್ನು ಕೋರಲಾಯಿತು.

ಈ ಸಂದರ್ಭದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಎನ್ ಎಚ್ ಕೋನರೆಡ್ಡಿ, ಹೋರಾಟಗಾರ ಬಿ ಡಿ ಹಿರೇಮಠ, ಹಿರಿಯ ನ್ಯಾಯವಾದಿ ನೇಗಿನಾಳ, ಸಂತೋಷ ಪಟ್ಟಣಶೆಟ್ಟಿ, ದಾನಪ್ಪ ಕಬ್ಬೇರ, ಜೆಡಿಎಸ್ ನಾಯಕ ಗುರುರಾಜ ಹುಣಸಿಮರದ, ಕಮ್ಮಾರ, ಮಯೂರ ಮೋರೆ, ಸದುಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಿಜೆಪಿಯ ಎಚ್ಚರಿಕೆ ಹೆಜ್ಜೆ 

ಪ್ರತ್ತೈಕ್ ಪಾಲಿಕೆ ಹೋರಾಟ ಆರಂಭವಾಗಿ 6 ದಿನಗಳಾದರು, ಬಿಜೆಪಿ ನಾಯಕರಾಗಲಿ, ಪಾಲಿಕೆ ಸದಸ್ಯರಾಗಲಿ ಹೋರಾಟಕ್ಕೆ ಧುಮುಕದೆ ಇರುವದು, ಸಾರ್ವಜನಿಕರ  ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಬಿಜೆಪಿ ಎಚ್ಚರಿಕೆ ಹೆಜ್ಜೆ ಇಟ್ಟಿದೆ.

ಪ್ರತಿಭಟನಾಕಾರರು ದಶದಿಕ್ಕುಗಳಿಂದ ಮೆರವಣಿಗೆ ಮೂಲಕ ಬಂದು ಪ್ರತ್ತೈಕ್ ಪಾಲಿಕೆ ಹೋರಾಟದಲ್ಲಿ ಭಾಗವಹಿಸುತ್ತಿದ್ದು, ಬಿಜೆಪಿಗರ ನಿದ್ದೆಗೆಡಿಸಿದೆ.

ರಾಜ್ಯಪಾಲರನ್ನು ನಿನ್ನೆ ಭೇಟಿ ಮಾಡಿ ಬಂದ ಕೇಂದ್ರ ಸಚಿವ ಪ್ರಲ್ಲಾದ ಜೋಶಿ, ಆದಷ್ಟು ಶೀಘ್ರದಲ್ಲಿ ಅಂಕಿತ ಹಾಕಬೇಕು ಎಂಬ ಒತ್ತಡ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಭೇಟಿಯಾದ ನಿಯೋಗಕ್ಕೆ ರಾಜ್ಯಪಾಲರು ಅಭಯ ನೀಡಿದ್ದು, ಕಾನೂನು ಅಭಿಪ್ರಾಯ ಪಡೆದು ಶೀಘ್ರದಲ್ಲಿ ಅಂಕಿತ ಹಾಕುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!