ಕರ್ನಾಟಕ ಅನೇಕ ಹೋರಾಟಗಾರರನ್ನು ಕಂಡಿದೆ. ಅದರಲ್ಲೂ ಧಾರವಾಡ, ಹೋರಾಟದ ಗಂಡು ಮೆಟ್ಟಿನ ನೆಲ. ಈ ನೆಲದಿಂದ ಆರಂಭವಾದ ಹೋರಾಟಗಳು ಆಳುವ ಸರ್ಕಾರಗಳನ್ನು ಬಡಿದೆಬ್ಬಿಸಿವೆ.
ಅಂತಹದೇ ಮತ್ತೊಂದು ಐತಿಹಾಸಿಕ ಹೋರಾಟಕ್ಕೆ ಹೈಕೋರ್ಟ್ ಪೀಠದ ರೂವಾರಿ ಬಿ ಡಿ ಹಿರೇಮಠ ಇದೀಗ ಸಜ್ಜಾಗಿದ್ದಾರೆ.
ಏನದು ಹೋರಾಟ : ಹೋರಾಟದಿಂದ ಯಾರಿಗೆ ಲಾಭ
ಬಿ ಡಿ ಹಿರೇಮಠ ಅವರು ಇದೀಗ ಗುತ್ತಿಗೆ ಕಾರ್ಮಿಕರ ಪರ ದ್ವನಿ ಎತ್ತಿದ್ದಾರೆ. ಕರ್ನಾಟಕದಲ್ಲಿ ಸುಮಾರು 1 ಕೋಟಿ 75 ಲಕ್ಷ ಜನ ಕಾರ್ಮಿಕರಿದ್ದು, ಅವರಿಗೆ ಪರಿಷ್ಕರಿಸಿದ ಕನಿಷ್ಟ ವೇತನ ನೀಡುವಂತೆ ಹೋರಾಟ ಕೈಗೆತ್ತಿಕೊಂಡಿದ್ದಾರೆ.
ದುಡಿಯುವ ಕೈಗಳು ಕನಿಷ್ಟ ವೇತನ ಸಿಗದೇ ಹಸಿವಿನ ರೇಖೆಗಿಂತ ಕೆಳಗೆ ತಳ್ಳಲ್ಪಟ್ಟಿದ್ದಾರೆ. ಸರ್ಕಾರ ನಿರ್ಲಕ್ಷ ಧೋರಣೆ ತಾಳಿದ ಪರಿಣಾಮ, ದುಡಿಯುವ ಕೈಗಳಿಗೆ ಬರೆ ನೀಡಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಲ್ಲಿ ವ್ಯವಸ್ಥೆ ಕುಸಿದಿದೆ.
1948 ರ ಕನಿಷ್ಟ ವೇತನ ಕಾಯ್ದೆಯ ಸೆಕ್ಷನ್ 3(1)(ಬಿ) ಅಡಿಯಲ್ಲಿ 5 ವರ್ಷಕ್ಕೆ ಮೀರದಂತೆ ಕನಿಷ್ಟ ವೇತನ ಪರಿಷ್ಕರಣೆ ಮಾಡಬೇಕು.
ಆದರೆ 2017 ರಲ್ಲಿ ವೇತನ ಪರಿಷ್ಕರಣೆ ಅಧಿಸೂಚನೆ ಹೊರಡಿಸಿತ್ತು. ಎರಡು ತಿಂಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸಮಯ ನೀಡಿತ್ತು. ಸಮಯ ಕೊನೆಗೊಂಡರು ಸರ್ಕಾರ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಬಿ ಡಿ ಹಿರೇಮಠ ಅವರು ಆಕ್ರೋಶ ವ್ಯಕ್ತಪಡಿಸಿದರು.
84 ಶೇಡ್ಯೂಲ್ ಗಳಲ್ಲಿ ಗುರುತಿಸಿರುವ, ರಾಜ್ಯದ ಸುಮಾರು 1 ಕೋಟಿ 75 ಲಕ್ಷ ಕಾರ್ಮಿಕರಿಗೆ ಕನಿಷ್ಟ ವೇತನ ತಿಂಗಳಿಗೆ 23 ಸಾವಿರದಾ 500 ರೂಪಾಯಿ ನೀಡಬೇಕೆಂದು ಹಿರೇಮಠ ಅವರು ಆಗ್ರಹಿಸಿದ್ದಾರೆ.
ಗುತ್ತಿಗೆ ಕಾರ್ಮಿಕರ ಪರಿಷ್ಕರಿಸಿದ ಕನಿಷ್ಠ ವೇತನಕ್ಕೆ ಆಗ್ರಹಿಸಿ “ಸಮಗ್ರ ಕರ್ನಾಟಕ ಕಾರ್ಮಿಕರ ಹಿತರಕ್ಷಣಾ ಸಮಿತಿ ಮತ್ತು ಕಾರ್ಮಿಕ ಸೇನಾ” ಅಧ್ಯಕ್ಷ ಬಿ.ಡಿ.ಹಿರೇಮಠ ಅವರ ನೇತೃತ್ವದಲ್ಲಿ ಇಂದು ಕಾರ್ಮಿಕರು, ಧಾರವಾಡದಲ್ಲಿ ಉಪ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಬಿ ಡಿ ಹಿರೇಮಠ ಅವರು ಕೈಗೆಟ್ಟಿಕೊಂಡ ಹೋರಾಟಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸ್ಪಂಧಿಸಿದ್ದು, ನಿಗದಿತ ಸಮಯದೊಳಗೆ ಸರ್ಕಾರ ಕನಿಷ್ಟ ವೇತನ ಘೋಷಣೆ ಮಾಡದಿದ್ದಲ್ಲಿ, ಹೋರಾಟ ಮತ್ತಷ್ಟು ತೀವ್ರಗೊಳಿಸುವದಾಗಿ ಹೇಳಿದ್ದಾರೆ.





