Download Our App

Follow us

Home » ರಾಜಕೀಯ » ಡಿ ಕೆ ಶಿವಕುಮಾರ ಅವರಿಗೆ ಶುಕ್ರದೆಸೆ / ಶುಕ್ರವಾರ ಕಾಂಗ್ರೇಸ್ ಶಾಸಕಾಂಗ ಸಭೆ

ಡಿ ಕೆ ಶಿವಕುಮಾರ ಅವರಿಗೆ ಶುಕ್ರದೆಸೆ / ಶುಕ್ರವಾರ ಕಾಂಗ್ರೇಸ್ ಶಾಸಕಾಂಗ ಸಭೆ

ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿ ಮಹತ್ತರ ಬದಲಾವಣೆಯಾಗುವದು ಖಚಿತವಾಗಿದ್ದು, ಡಿ ಕೆ ಶಿವಕುಮಾರ ಅವರಿಗೆ ಶುಕ್ರದೆಸೆ ಬಂದೊದಗಿದೆ.

ಶುಕ್ರವಾರ ಕಾಂಗ್ರೇಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಡಿ ಕೆ ಶಿವಕುಮಾರ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗೋದು ಖಾತ್ರಿಯಾಗಿದೆ.

ಇಂದು ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ರಾಹುಲ್ ಗಾಂಧಿಯವರು ಸಭೆ ನಡೆಸಿದ್ದು, ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಒಪ್ಪಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯನವರು ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಆಪ್ತರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ರಾಜೀನಾಮೆ ನೀಡುತ್ತಾರೆ ಎಂದು ಪಕ್ಷದ ಮೂಲಗಳು ಖಚಿತ ಪಡಿಸಿವೆ.

ಡಿ ಕೆ ಶಿವಕುಮಾರ ಮುಖ್ಯಮಂತ್ರಿ, ನಾಲ್ವರು ಉಪ ಮುಖ್ಯಮಂತ್ರಿ

 

ಡಿ ಕೆ ಶಿವಕುಮಾರ ಮುಖ್ಯಮಂತ್ರಿಯಾದರೆ ನಾಲ್ವರು ಉಪ ಮುಖ್ಯಮಂತ್ರಿಗಳಾಗುತ್ತಾರೆ ಎನ್ನಲಾಗಿದೆ.

 

ಸಿದ್ದರಾಮಯ್ಯನವರ ಮಗ ಡಾ, ಯತಿಂದ್ರ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ, ಎಮ್ ಬಿ ಪಾಟೀಲ ಅಥವಾ ಈಶ್ವರ ಖಂಡ್ರೆ ಮತ್ತು ಜಮೀರಅಹ್ಮದ ಖಾನ ಉಪ ಮುಖ್ಯಮಂತ್ರಿಯಾಗ್ತಾರೆ ಎನ್ನಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!