Download Our App

Follow us

Home » ಕಾನೂನು » ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ / ಡಿಕೆಶಿ ಗೆ ಪಟ್ಟ : ಸಿದ್ದರಾಮಯ್ಯನವರ ಜರ್ನಿ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ / ಡಿಕೆಶಿ ಗೆ ಪಟ್ಟ : ಸಿದ್ದರಾಮಯ್ಯನವರ ಜರ್ನಿ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಸುಧೀರ್ಘ ಅವಧಿಗೆ ರಾಜ್ಯದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಹೊಂದಿದ ಸಿದ್ದರಾಮಯ್ಯನವರು ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.

ನಾಳೆ 11 ಘಂಟೆಗೆ ರಾಜ್ಯಪಾಲರ ಸಮಯ ಕೇಳಿರುವ ಅವರು ತಮ್ಮ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ.

ಸಿದ್ದರಾಮಯ್ಯನವರ ರಾಜಕಾರಣದ ಜರ್ನಿ ಹೀಗಿದೆ 

ಬಡ ಕುಟುಂಬದಿಂದ ಸಿದ್ದರಾಮಯ್ಯನವರು  1978 ರಲ್ಲಿ ಮೈಸೂರಿನಲ್ಲಿ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರು.

1983 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಚೊಚ್ಚಲ ಪ್ರವೇಶ ಮಾಡಿದ ಅವರು,

ಸೋಲು ಗೆಲುವನ್ನು ಕಂಡವರು. 1983 ರಲ್ಲಿ ಅವರು ಚುನಾವಣಾ ಪ್ರವೇಶ ಮಾಡಿದರು.   ಲೋಕದಳ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ಸ್ಥಾನವನ್ನು ಗೆದ್ದರು. ನಂತರ ಅವರು ಜನತಾ ಪಕ್ಷಕ್ಕೆ ಸೇರ್ಪಡೆಯಾದರು.

ವೃತ್ತಿಯಿಂದ ವಕೀಲರಾದ ಅವರಿಗೆ ರಾಜಕಾರಣದಲ್ಲಿ ಏಳು ಬೀಳುಗಳನ್ನು ಕಂಡರೂ ಅವರು ದೃತಿಗೆಡಲಿಲ್ಲ. ರಾಜ್ಯ ರಾಜಕಾರಣದಲ್ಲಿ ಒಂದೊಂದೆ ಮೆಟ್ಟಲುಗಳನ್ನು ಏರುತ್ತ ಹೊರಟ ಅವರು, ಪ್ರಮುಖ ಸಚಿವ ಸ್ಥಾನಗಳನ್ನು ಅಲಂಕರಿಸಿದರು.

ಸಮಾಜವಾದಿ ಒಲವುಗಳಿಗೆ ಹೆಸರುವಾಸಿಯಾದ ಅವರು ಹಣಕಾಸು ಸಚಿವರಾಗಿ 17 ಬಾರಿ ರಾಜ್ಯ ಬಜೆಟ್ ಮಂಡಿಸಿದ್ದಾರೆ.

ಉಪಮುಖ್ಯಮಂತ್ರಿಯಾಗಿ 7 ಬಾರಿ ಬಜೆಟ್ ಮಂಡಿಸಿದ್ದ ಅವರು, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್ ಮತ್ತು ಎನ್. ಧರಂ ಸಿಂಗ್ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಒಟ್ಟು 7 ಬಾರಿ ಆಯವ್ಯಯ ಮಂಡಿಸಿದ್ದರು.

ಮುಖ್ಯಮಂತ್ರಿಯಾಗಿ 10 ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ಅವರದ್ದಾಗಿದೆ. ಆರ್ಥಿಕ ತಜ್ಞರಾಗಿರುವ ಸಿದ್ದರಾಮಯ್ಯನವರು, ರಾಜ್ಯದ ಆರ್ಥಿಕ ಸಮತೋಲನವನ್ನು ಕಾಯ್ದುಕೊಂಡು ಬಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಾಜ್ಯದ ಒಟ್ಟು ಸಾಲದ ಪ್ರಮಾಣವು ಸುಮಾರು ₹8.24 ಲಕ್ಷ ಕೋಟಿಗೆ ತಲುಪಿದೆ.

ವಿರೋಧ ಪಕ್ಷಗಳ ಆರೋಪದ ಪ್ರಕಾರ, ಅವರ ಹಿಂದಿನ ಮತ್ತು ಪ್ರಸ್ತುತ ಅಧಿಕಾರದ ಅವಧಿಯಲ್ಲಿ ಸುಮಾರು ₹5.85 ಲಕ್ಷ ಕೋಟಿಗೂ ಅಧಿಕ ಸಾಲವನ್ನು ಮಾಡಲಾಗಿದೆ ಎಂದು ವರದಿಯಾಗಿದೆ.

2026ರ ಬಜೆಟ್ ಅಂದಾಜಿನ ಪ್ರಕಾರ ರಾಜ್ಯದ ಒಟ್ಟು ಸಾಲವು ₹8,24,389 ಕೋಟಿಗಳನ್ನು ದಾಟಲಿದ್ದು, ಪ್ರತಿ ಕನ್ನಡಿಗನ ಮೇಲೆ ಸರಾಸರಿ ₹1.17 ಲಕ್ಷ ಸಾಲದ ಹೊರೆ ಬಿದ್ದಿದೆ. ಇದು ರಾಜ್ಯದ ಅಭಿವೃದ್ಧಿಯ ಬೆಳವಣಿಗೆ ಮತ್ತು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಮಾಡಿದ ಸಾಲವಾಗಿದೆ.

ಸಿದ್ದರಾಮಯ್ಯನವರ ಸರ್ಕಾರದಲ್ಲಿ ರಾಜ್ಯದ ಆದಾಯ ನಿರೀಕ್ಷೆ

ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು 2026-27ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು ₹3,15,050 ಕೋಟಿ ಆದಾಯವನ್ನು ನಿರೀಕ್ಷಿಸಿದೆ.

ಇದರಲ್ಲಿ ರಾಜ್ಯದ ಸ್ವಂತ ತೆರಿಗೆ ಆದಾಯ ₹2,20,000 ಕೋಟಿ, ಕೇಂದ್ರದಿಂದ ಬರುವ ತೆರಿಗೆ ಪಾಲು ಮತ್ತು ಅನುದಾನಗಳು ಸೇರಿವೆ. ಆದರೆ ಕೇಂದ್ರದಿಂದ ಬರಬೇಕಿದ್ದ ಪಾಲು ಬರದೇ ಇರೋದರಿಂದ ಸಾಲದ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ವಾಣಿಜ್ಯ ತೆರಿಗೆ, ಅಬಕಾರಿ, ಮೋಟಾರು ವಾಹನ ತೆರಿಗೆ ಮತ್ತು ಮುದ್ರಾಂಕ ಶುಲ್ಕಗಳನ್ನು ಒಳಗೊಂಡಂತೆ ರಾಜ್ಯವು ಬಜೆಟ್‌ನಲ್ಲಿ ₹2,20,000 ಕೋಟಿ ಸಂಗ್ರಹಿಸುವ ಗುರಿಯನ್ನು ಹೊಂದಿದೆ. ( ಅಬಕಾರಿ ಇಲಾಖೆಯ ಆದಾಯ ಗುರಿಯನ್ನು ₹45,000 ಕೋಟಿಗೆ ಹೆಚ್ಚಿಸಲಾಗಿದೆ).

ಕೇಂದ್ರ ಸರ್ಕಾರದಿಂದ ₹79,500 ಕೋಟಿ ರಾಜ್ಯಕ್ಕೆ ಹರಿದು ಬರಬೇಕಿದೆ.

2026-27ನೇ ಸಾಲಿಗೆ ಒಟ್ಟು ₹4,48,004 ಕೋಟಿ ಗಾತ್ರದ ದಾಖಲೆಯ ಬಜೆಟ್ ಅನ್ನು ಮಂಡಿಸಿದ್ದಾರೆ.

ಸಿದ್ದರಾಮಯ್ಯನವರ ಸಾಧನೆಯ ನೋಟ 

ಜನತಾ ದಳ (ಜಾತ್ಯತೀತ) ಸರ್ಕಾರಗಳ ಅಡಿಯಲ್ಲಿ (1996–1999 ಮತ್ತು 2004–2005) ಎರಡು ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಜನತಾದಳದಲ್ಲಿದ್ದಾಗ ವೈಮನಸ್ಸಿನಿಂದ ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡುವ ಮೂಲಕ ಸಿದ್ದರಾಮಯ್ಯನವರು ಹಿಂದುಳಿದ ನೇತಾರ ಎಂಬುದನ್ನು ಸಾಬೀತು ಪಡಿಸಿದರು.

2005 ರಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರೊಂದಿಗಿನ ಭಿನ್ನಾಭಿಪ್ರಾಯದ ನಂತರ, ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಹೊರಹಾಕಲಾಯಿತು. ನಂತರ ಸಿದ್ದರಾಮಯ್ಯನವರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದರು.

2013–2018 ರ ತನಕ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಭರ್ಜರಿ ಗೆಲುವಿನತ್ತ ಮುನ್ನಡೆಸಿದ ಅವರು, ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸಿದರು.

40 ವರ್ಷಗಳಲ್ಲಿ ಪೂರ್ಣ 5 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಮೊದಲ ಮುಖ್ಯಮಂತ್ರಿಯಾಗಿ ಧಾಖಲೆ ಬರೆದರು.

ಬಡವರ ಕಷ್ಟ ಕಾರ್ಪಣ್ಯಗಳನ್ನು ಹತ್ತಿರದಿಂದ ಕಂಡಿದ್ದ ಸಿದ್ದರಾಮಯ್ಯನವರು, ಅನ್ನ ಭಾಗ್ಯ ನಂತಹ ಸಾಮೂಹಿಕ ಕಲ್ಯಾಣದ ಮೇಲೆ ಹೆಚ್ಚು ಗಮನಹರಿಸಿದರು.

ವಿರೋಧ ಪಕ್ಷದಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದ ನಂತರ, 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಅವರು ಮತ್ತೆ ಮುಖ್ಯಮಂತ್ರಿಯಾದರು.

ದಾಖಲೆಯ ಮೈಲಿಗಲ್ಲು

ಜನವರಿ 2026 ರಲ್ಲಿ, ಅವರು ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ಅವರನ್ನು ಹಿಂದಿಕ್ಕಿ ಕರ್ನಾಟಕದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಯಾದರು.

ನಾಳೆ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಧಾಖಲೆಯ ಅವಧಿ ಪೂರೈಸಿ, ಅನೇಕ ಭಾಗ್ಯಗಳ ಸರದಾರರಾಗಿ ಹೆಸರು ಮಾಡಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ.

ಸಿದ್ದರಾಮಯ್ಯನವರು ಹೈಕಮಾಂಡ್ ಮಾತಿಗೆ ಒಪ್ಪಿ ನಾಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಗೋಚರವಾಗುತ್ತಿದ್ದು, ನಾಳಿದ್ದು ಡಿ ಕೆ ಶಿವಕುಮಾರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಫೈರಿಂಗ್ ಮಾಡಿ ಠಾಣೆಗೆ ಬಂದಿದ್ದ ಮುಖ್ಯ ಆರೋಪಿಯನ್ನು ಬಚಾವ್ ಮಾಡಿದ್ರಾ? ಹೌದು ಅನ್ನುತ್ತಿವೆ ಮೂಲಗಳು : ಖಾಕಿ ಮರ್ಯಾದೆ ಹರಾಜು !

ನಾಲ್ಕು ದಿನಗಳ ಹಿಂದೆ ಧಾರವಾಡದ ತಡಸಿನಕೊಪ್ಪ ಸರಹದ್ದಿನಲ್ಲಿ ನಡೆದ ಫೈರಿಂಗ್ ವಿಷಯಕ್ಕೆ ಅಸಲಿ ವಿಷಯ ಹೊರಬೀಳುತ್ತಿದೆ. ಕರ್ನಾಟಕ ಫೈಲ್‌ಗಳು ಲಭ್ಯವಾದ ಮತ್ತು ದೃಢೀಕರಿಸಲ್ಪಟ್ಟ ಮಾಹಿತಿಯಂತೆ ಫೈರಿಂಗ್ ಮಾಡಿದ

Live Cricket

error: Content is protected !!