ನಾಲ್ಕು ದಿನಗಳ ಹಿಂದೆ ಧಾರವಾಡದ ತಡಸಿನಕೊಪ್ಪ ಸರಹದ್ದಿನಲ್ಲಿ ನಡೆದ ಫೈರಿಂಗ್ ವಿಷಯಕ್ಕೆ ಅಸಲಿ ವಿಷಯ ಹೊರಬೀಳುತ್ತಿದೆ.
ಕರ್ನಾಟಕ ಫೈಲ್‌ಗಳು ಲಭ್ಯವಾದ ಮತ್ತು ದೃಢೀಕರಿಸಲ್ಪಟ್ಟ ಮಾಹಿತಿಯಂತೆ ಫೈರಿಂಗ್ ಮಾಡಿದ ನಂತರ ಮುಖ್ಯ ಆರೋಪಿ ಸುಂದರ ಪೌಲ್, ವಿದ್ಯಾಗಿರಿ ಠಾಣೆಗೆ ಬಂದಿದ್ದ.
ಹಾಗದ್ರೆ ಯಾಕೆ ಹಿಡಿಯಲಿಲ್ಲ ಪೋಲೀಸರು : ಅಲ್ಲಿಂದ ಪಾರಾಗಲು ಸಹಕರಿಸಿದ ಅಧಿಕಾರಿ ಯಾರು
ಇಂತಹ ಒಂದು ವಿಷಯ ಇದೀಗ ಚರ್ಚೆಯಲ್ಲಿದೆ. ಸುಂದರ ಪೌಲ್ ಮತ್ತು ತಂಡ ತಡಸಿನಕೊಪ್ಪದಲ್ಲಿ ಫೈರಿಂಗ್ ಮಾಡಿದ ಬಳಿಕ ವಿದ್ಯಾಗಿರಿ ಠಾಣೆಗೆ ಬಂದಿದ್ದರಂತೆ. ಆ ವಿಷಯ ಯಾವಾಗ ಇನ್ಸಪೆಕ್ಟರ್ ಒಬ್ಬರ ಕಿವಿಗೆ ಬಿತ್ತೋ, ಸುಂದರ ಪೌಲ್ ನನಗೆ ಅಲ್ಲಿಂದ ತೆರಳುವಂತೆ ಸಹಕಾರ ನೀಡಿದ್ದರ ಬಗ್ಗೆ ಸಂಗತಿ ಒಂದೊಂದಾಗಿ ಹೊರಬೀಳುತ್ತಿವೆ.
ಫಿಲೋಮೀನಾ ಗೋಟೆನಕಲ್ ಬಂಧನದ ಹಿಂದೆ ಬಚಾವಾಗುವ ಪ್ರಯತ್ನನಾ
ಅಸಲಿಗೆ ಆ ಘಟನೆ ನಡೆದಾಗ ಫಿಲೋಮೀನಾ ಸ್ಥಳದಲ್ಲಿ ಇರಲಿಲ್ಲ. ಯಾವಾಗ ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಯ್ತೋ, ಅಷ್ಟೋತ್ತಿಗೆ ಪ್ರಮುಖ ಆರೋಪಿ ಸುಂದರ ಪೌಲ್ ಪರಾರಿಯಾಗಿದ್ದ.
ಯಾವಾಗ ಒತ್ತಡಗಳು ಬಂದವೋ, ಹನ್ಸ್ ಹೋಟೆಲ್ ನಲ್ಲಿದ್ದ ಫಿಲೋಮೀನಾ ಗೋಟೆನಕಲ್ ರನ್ನು ಹುಬ್ಬಳ್ಳಿಯ ವಿದ್ಯಾನಗರ ಠಾಣೆಗೆ ಕರೆತಂದು, ವಿಚಾರಣೆ ನಡೆಸಿ, ತದನಂತರ ಅವರನ್ನು ಬಂಧಿಸಲಾಗಿದೆ.
ವಿದ್ಯಾಗಿರಿ ಠಾಣೆ ನಡೆದ ಈ ಘಟನೆ ಅವಳಿಗೆ ತಲ್ಲಣ ಮೂಡಿಸಿದೆ. ಖಾಕಿ ಬಟ್ಟೆ ತೊಟ್ಟು, ಖಾಕಿ ಮರ್ಯಾದೆ ತೆಗೆಯುತ್ತಿರುವ ಕೆಲ ಅಧಿಕಾರಿಗಳಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ.
ಘಟನೆಗೂ ಮುನ್ನ ಮಾಹಿತಿ ಇತ್ತು, ರೌಡಿಗಳಿಗೆ ಪಾಠ ಹೇಳಿಕೊಟ್ಟವರು ಯಾರು ಅನ್ನೋದರ ಬಗ್ಗೆ ತನಿಖೆ ನಡೆಯಬೇಕಿದೆ.
ಪೊಲೀಸ್ ಆಯುಕ್ತ ಎನ್ ಶಶಿಕುಮಾರ ದಾರಿ ತಪ್ಪಿಸಿದರು
ಈ ಘಟನೆ ನಡೆದ ಬಳಿಕ ಖಾಸಗಿ ಆಸ್ಪತ್ರೆಗೆ ಭೇಟಿ ಕೊಟ್ಟ ಪೊಲೀಸ್ ಆಯುಕ್ತ ಎನ್ ಶಶಿಕುಮಾರ, ಗಾಯಾಳುವಿನಿಂದ ಬಂದ ಮಾಹಿತಿ ಕಲೆ ಹಾಕಿ, ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವಂತೆ ನೋಡಲಾಗಿದೆ.
ಈ ಪ್ರಕರಣವನ್ನು ಎನ್ ಶಶಿಕುಮಾರ ಅವರ ತಲೆಗೆ ಕಟ್ಟಬೇಕು ಎಂದು ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪ ಏನಿದ್ದರು ಸಹ, ಈ ಪ್ರಕರಣದಲ್ಲಿ ಎನ್ ಶಶಿಕುಮಾರ ಅವರ ಪಾತ್ರ ಕಂಡು ಬರುವದಿಲ್ಲ.
ಅತ್ತ ಗಾಯಾಳು ಭೇಟಿ ಮಾಡಿ ಹೊರಗೆ ಬಂದ ಎನ್ ಶಶಿಕುಮಾರ ಅವರಿಗೆ, ಘಟನೆ ಬಗ್ಗೆ ತಪ್ಪು ಮಾಹಿತಿ ಕೊಡಲಾಯ್ತು ಅನ್ನೋದರ ಬಗ್ಗೆ ಕೆಲ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಮುಂಬೈ, ಬಿಹಾರದಲ್ಲಿ ನಡೆಯುತ್ತಿದ್ದ ಮತ್ತು ಸುದ್ದಿಯಾಗುತ್ತಿದ್ದ ಇಂತಹ ಘಟನೆಗಳು ಧಾರವಾಡಕ್ಕೂ ಕಾಲಿಟ್ಟಿಲ್ಲ ಅನ್ನೋ ನೋವು ಅವಳಿ ನಗರದ ಪ್ರತಿಯೂಬ್ಬರಲ್ಲಿದೆ.




