Download Our App

Follow us

Home » ಕಾನೂನು » ಧಾರವಾಡ ಶಹರ ಠಾಣೆ ಪೊಲೀಸರ ಕಾರ್ಯಾಚರಣೆ : ಕುಖ್ಯಾತ ಕಳ್ಳನ ಬಂಧನ

ಧಾರವಾಡ ಶಹರ ಠಾಣೆ ಪೊಲೀಸರ ಕಾರ್ಯಾಚರಣೆ : ಕುಖ್ಯಾತ ಕಳ್ಳನ ಬಂಧನ

ಧಾರವಾಡ ಶಹರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಒಟ್ಟು ನಾಲ್ಕು ಕಳ್ಳತನದ ಪ್ರಕರಣಗಳನ್ನು ಶಹರ ಪೊಲೀಸರು ಪತ್ತೆಮಾಡಿದ್ದಾರೆ.

ಈ ಪೈಕಿ ಎರಡು ಮನೆ ಕಳ್ಳತನ, ಒಂದು ಗುಡಿ ಕಳ್ಳತನ ಹಾಗೂ ದ್ವಿಚಕ್ರ ವಾಹನ ಕಳ್ಳತನ ಮಾಡಿದ ಆರೋಪಿತನನ್ನು ಧಾರವಾಡ ಶಹರ ಪೊಲೀಸ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಬಂಧಿಸಿದ್ದಾರೆ.

ಆರೋಪಿತನ ಕಡೆಯಿಂದ ಅಂದಾಜು 5,04,000/- ರೂ ಮೌಲ್ಯದ, ಒಟ್ಟು 42 ಗ್ರಾಂ ಆಭರಣ ಹಾಗೂ ಅಂದಾಜು 4,500/- ಕಿಮ್ಮತ್ತಿನ ಒಟ್ಟು 20 ಗ್ರಾಂ ತೂಕದ ಬೆಳ್ಳಿಯ ಆಭರಣ, ಮತ್ತು ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

 

ಆರೋಪಿ, ಆಸೀಪ್ ಬೇಗ್ ನನ್ನು ಬಂಧಿಸಲಾಗಿದ್ದು, ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಧಾರವಾಡ ಶಹರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ, ಗುರುನಾಥ ಚವ್ಹಾಣ , ಪಿ ಎಸ್ ಐ ಆರ್ ಎಚ್ ನದಾಪ್ ಸೇರಿದಂತೆ, 

ಸಿಬ್ಬಂದಿಗಳಾದ ಜಿ.ಜಿ ಚಿಕ್ಕಮಠ, ಐ.ಪಿ.ಬುರ್ಜಿ, ಆರ್ ಎಸ್ ಪಾಟೀಲ, ಡಿ.ಕೆ.ನದಾಪ್, ಪ್ರವೀಣ ತಿರ್ಲಾಪೂರ, ಸಂತೋಷ ಪೂಜಾರ, ಬಿ.ಎಲ್.ಹಣಮನ್ನವರ, ಎಮ್.ಆರ್.ಜ್ಯಾಲಿ, ಎಮ್.ಎಸ್.ಚಿಕ್ಕಮ್ಮಠ, ಆರ್.ಕೆ.ಭಡಂಕರ, ಆರ್.ಎಸ್.ಗೋಮಪ್ಪನವರ ತಾಂತ್ರಿಕ ಸಿಬ್ಬಂದಿಯವರ ಸಹಾಯದಿಂದ, ಆರೋಪಿತನನ್ನು ಪತ್ತೆ ಮಾಡಲಾಗಿದೆ.

ಪ್ರಕರಣ ಭೇದಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಪೊಲೀಸ್ ಆಯುಕ್ತರು, ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿಮ್ಮ ಮುಂದಿನ ಪಯಣ ಮತ್ತಷ್ಟು ಯಶಸ್ವಿಯಾಗಲಿ

ಎನ್ ಶಶಿಕುಮಾರ ಹುಬ್ಬಳ್ಳಿಗೆ ಕಮಿಷನರ್ ಆಗಿ ಬಂದಂತ ಸಮಯದಲ್ಲಿ ಅನೇಕ ಸವಾಲುಗಳು ಅವರ ಬೆನ್ನಿಗೇರಿದ್ದವು.  ಅವರ ಬಗ್ಗೆ, ಅವರ ಕೆಲಸದ ಸ್ಟೈಲ್ ಬಗ್ಗೆ, ಅವರು ಅಧಿಕಾರ ಸ್ವೀಕರಿಸುವದಕ್ಕೂ

Live Cricket

error: Content is protected !!