ಉತ್ತರ ಪ್ರದೇಶದಲ್ಲಿ ಯುವಕನೊಬ್ಬ ಮೂವರು ಸಹೋದರಿಯರನ್ನು, ಒಟ್ಟಿಗೆ ವಿವಾಹವಾಗಿರುವ ಪ್ರಮುಖ ವಿಚಾರ ಇದೀಗ ವಿವಾದಕ್ಕಿಡಾಗಿದೆ.
ಉತ್ತರ ಪ್ರದೇಶದ ಧೌರಿಯಾ ಗ್ರಾಮದ ಮೂವರು ಸಹೋದರಿಯರಾದ ಸರೋಜಿ (20), ಸಾವಿತ್ರಿ (19) ಮತ್ತು ಸಂತೋಷಿ (18) ಒಂದೇ ವ್ಯಕ್ತಿಯನ್ನು ವಿವಾಹವಾಗಿದ್ದಾರೆ.
ಮೂವರು ಸಹೋದರಿಯರು ಸಾಮಾಜಿಕ ಜಾಲತಾಣಗಳಲ್ಲಿ ಹೆಸರು ಮಾಡಿದ್ದಾರೆ. ಮೂವರು ಸಹ ನಿಯಮಿತವಾಗಿ ವೀಡಿಯೊಗಳನ್ನು ರಚಿಸುತ್ತಾರೆ.
ಈ ಮೂವರು ಸಹೋದರಿಯರು ಕ್ಯಾಮೆರಾಮನ್ ವಿಕಾಸ್ ಎಂಬುವನನ್ನು ದೇವಾಲಯವೊಂದರಲ್ಲಿ ವಿವಾಹವಾಗಿದ್ದಾನೆ.
ಸಹೋದರಿಯರ ಪ್ರಕಾರ, ಅವರ ಕುಟುಂಬವು ಪ್ರತಿಯೊಬ್ಬರಿಗೂ ಪ್ರತ್ಯೇಕ ವಿವಾಹಗಳನ್ನು ಏರ್ಪಡಿಸಲು ಬಯಸಿತ್ತು. ಆದರೆ ಮೂವರು ಸಹೋದರಿಯರು, ಪರಸ್ಪರ ಬೇರ್ಪಡಲು ಬಯಸಲಿಲ್ಲ ಎನ್ನಲಾಗಿದೆ.
ಸಧ್ಯ ಈ ವಿವಾಹವು ವಿವಾದವನ್ನು ಹುಟ್ಟುಹಾಕಿದೆ. ಕೆಲವು ಸ್ಥಳೀಯ ಹಿಂದೂ ಸಂಘಟನೆಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ.
ಇದು ಸನಾತನ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿವೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಹೋದರಿಯರು, ಪ್ರಾಚೀನ ಕಾಲದ ರಾಜರು ಬಹು ಪತ್ನಿಯರನ್ನು ಹೊಂದಿದ್ದರು ಮತ್ತು ಇಂದು ಅವರ ನಿರ್ಧಾರವನ್ನು ಏಕೆ ವಿಭಿನ್ನವಾಗಿ ಪರಿಗಣಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.





