ಧಾರವಾಡದ ಹೃದಯ ಭಾಗದಲ್ಲಿರುವ ಈ ಪೊಲೀಸ್ ಠಾಣೆಯಲ್ಲಿ ಹೃದಯಹೀನ ಕೆಲಸಗಳು ನಡೆಯುತ್ತಿವೆ.
ಧಾರವಾಡ ಶಹರ ಪೊಲೀಸ್ ಠಾಣೆ ಇತ್ತೀಚಿಗಂತೂ ದಿನಕ್ಕೊಂದು ಸುದ್ದಿಯಲ್ಲಿದೆ.
ಇಲ್ಲಿರುವ ಕೆಲವರು ಮಾಡುವ ಕೆಲಸಕ್ಕೆ ಖಾಕಿ ಮರ್ಯಾದೆ ಹರಾಜಾಗುತ್ತಿದೆ.
Spa ಮತ್ತು lodge ಗಳಿಂದ ಹಿಡಿದು, ನಕಲಿ ಔಷಧಿ, ಗಾಂಜಾ, ಪಡಿತರ ಅಕ್ಕಿ ಆಕ್ರಮ ಸಾಗಾಟ, ಬಡ್ಡಿ ಹಣ, ಸೇರಿದಂತೆ, ಅಲ್ಲಲ್ಲಿ ಎಲೆ ತಟ್ಟುವ ಶಬ್ದಗಳು ಕೇಳಿ ಬರುತ್ತವೆ.
ಈ ಠಾಣೆಗೆ ನೊಂದವರು, ಮೋಸಕ್ಕೆ ಒಳಗಾದವರು ಬಂದರೆ ಅವರಿಗೆ ನ್ಯಾಯ ಮರೀಚಿಕೆಯಾಗಿದೆ.
ಮೋಸಕ್ಕೆ ಒಳಗಾಗಿರುವ ಧಾರವಾಡದ ಪ್ರತಿಷ್ಟಿತ ಮನೆತನದ ಒಬ್ಬರು ನ್ಯಾಯಕ್ಕಾಗಿ ಬಹಳ ದಿನಗಳಿಂದ ಅಲೆಯುತ್ತಿದ್ದು, ಅವರಿಗೆ ಇನ್ನು ನ್ಯಾಯ ಸಿಗದೇ ಇರುವದು ದುರ್ದೈವದ ಸಂಗತಿಯಾಗಿದೆ.
ಕರ್ನಾಟಕ ಫೈಲ್ಸ್ ಬಳಿ ಮೋಸ ಹೋದವರ ಪಟ್ಟಿ ಇದ್ದು, ಈ ಪ್ರಕರಣಗಳನ್ನು ಧಾಖಲೆ ಸಮೇತ ಹೊರಹಾಕಲಿದೆ.
Author: Karnataka Files
Post Views: 366





