lರಾಜ್ಯದಲ್ಲಿ ಆಹಾರ ಕಲಬೆರಕೆ ಮೇಲೆ ದಿನನಿತ್ಯ ದಾಳಿ ಮುಂದುವರೆದಿದೆ.
ಧಾರವಾಡದ ರಿಲಾಯನ್ಸ ಮಳಿಗೆ ಮೇಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಮಾರಾಟಕ್ಕಿಟ್ಟ ಬೆಲ್ಲವನ್ನು ಪರೀಕ್ಷೆಗೆ ಒಳಪಡಿಸಿದಾಗ ಕಲಬೆರಕೆಯಾಗಿದೆ ಅನ್ನೋದು ಪತ್ತೆಯಾಗಿದೆ.ರಾಸಾಯನಿಕ ಮಿಶ್ರಣ ಹೊಂದಿರುವದು ಪರೀಕ್ಷೆ ವೇಳೆ ಬಯಲಾಗಿದೆ.
ಈ ಸಂಬಂಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಧಾರವಾಡ JMFC ನ್ಯಾಯಾಲಯದಲ್ಲಿ ಕೇಸು ಧಾಖಲು ಮಾಡಿದ್ದಾರೆ.
ಮಾರುಕಟ್ಟೆಯಲ್ಲಿ ದೊರೆಯುವ ಕೆಲವು ಬೆಲ್ಲದಲ್ಲಿ ಆಕರ್ಷಕ ಬಣ್ಣ ಮತ್ತು ಹೊಳಪಿಗಾಗಿ ರಸಾಯನಿಕಗಳು ಹಾಗೂ ಕೃತಕ ಬಣ್ಣಗಳನ್ನು ಮಿಶ್ರಣ ಮಾಡಲಾಗುತ್ತದೆ.
ಬೆಲ್ಲವು ಆಕರ್ಷಕವಾಗಿ (ಹಳದಿ ಅಥವಾ ತಿಳಿ ಬಂಗಾರದ ಬಣ್ಣದಲ್ಲಿ) ಕಾಣಲು ಕೆಲವು ತಯಾರಕರು ಅಲುಪಾಸೆ, ಸೋಡಾ, ಸಫೋಲೈಟ್ (safolite) ಮತ್ತು ಕೃತಕ ಬಣ್ಣಗಳನ್ನು ಬಳಸುತ್ತಾರೆ.
ಶುದ್ಧ ಬೆಲ್ಲವನ್ನು ಗುರುತಿಸುವುದು ಹೇಗೆ?
ಅತಿ ಹೆಚ್ಚು ಹೊಳಪಿನಿಂದ ಕೂಡಿದ ಅಥವಾ ಹಳದಿ/ಕಿತ್ತಳೆ ಬಣ್ಣದ ಬೆಲ್ಲಕ್ಕಿಂತ ಗಾಢ ಕಂದು (Dark brown) ಬಣ್ಣದ ಬೆಲ್ಲವು ಹೆಚ್ಚು ಸ್ವಾಭಾವಿಕವಾಗಿರುತ್ತದೆ.
ಬೆಲ್ಲವನ್ನು ನೀರಿನಲ್ಲಿ ಹಾಕಿದಾಗ ಅದು ಯಾವುದೇ ಅವಶೇಷ ಅಥವಾ ಕಲ್ಮಶಗಳನ್ನು ಬಿಡದೆ ನಿಧಾನವಾಗಿ ಕರಗಬೇಕು.
ಧಾರವಾಡದಲ್ಲಿಯೂ ಕಲಬೆರಕೆ ಆಹಾರ ಮಾರುಕಟ್ಟೆಯಲ್ಲಿ ಯಥಾವತ್ತಾಗಿ ಮಾರಾಟ maadalaagut





