ಇಡೀ ಧಾರವಾಡದ ಎಣ್ಣೆ ( ಬಾರ ) ಅಂಗಡಿಗಳು ರಾತ್ರಿ 11 ( ಹನ್ನೊಂದು ) ಘಂಟೆ ಆಯ್ತು ಅಂದರೆ ಬಾಗಿಲು ಹಾಕಿಕೊಳ್ಳುತ್ತವೆ.
ಆದರೆ ಧಾರವಾಡ ಶಹರ ಠಾಣೆ ವ್ಯಾಪ್ತಿಯಲ್ಲಿರುವ ಕೆಲ ಬಾರ್ ಅಂಗಡಿಗಳು ಮಾತ್ರ, ದುಡಿಯಲು ದಿನದ 24 ಘಂಟೆನೂ ಕಡಿಮೆನೇ ಅನ್ನೋ ತರದಲ್ಲಿ ತೆರೆದಿರುತ್ತವೆ.
ರಾತ್ರಿ ಗಸ್ತು ಕರ್ತವ್ಯಕ್ಕೆ ಬರುವ ಪೊಲೀಸರು ಲೈಟ್ ಬಂದ ಮಾಡಿ ಎಂದು ಹೇಳಿ ಹೋದ ನಂತರ, ಮತ್ತೆ ಬಾಟಲಿ ಸದ್ದು ಕೇಳಿ ಬರುತ್ತದೆ.
ದೊಡ್ಡ ವ್ಯಾಪ್ತಿ ಹೊಂದಿರುವ ವಿದ್ಯಾಗಿರಿ ಹಾಗೂ ಉಪನಗರ ಠಾಣೆ ಸರಹದ್ದಿನಲ್ಲಿ ಕೆಲವು ಬಾರ್ ಅಂಗಡಿಗಳು ಸಮಯಕ್ಕೆ ಸರಿಯಾಗಿ ಬಾಗಿಲು ಹಾಕಿಕೊಳ್ಳುತ್ತವೆ.
ಆದರೆ ಧಾರವಾಡದ ಹೃದಯ ಭಾಗದಲ್ಲಿರುವ ಬಾರ್ ಅಂಗಡಿಗಳ ಹೃದಯ ವೈಶಾಲ್ಯತೆ, ಪೋಲೀಸರ ವೈಫಲ್ಯ ಎತ್ತಿ ತೋರಿಸುತ್ತದೆ.
ತಿಂಗಳ ಹಾಜರಿ ತಪ್ಪಿಸಿದರೆ, ಬಾರ್ ಅಂಗಡಿಗಳು ಸರಿಯಾದ ಸಮಯಕ್ಕೆ ಬಂದ ಆಗುತ್ತವೆ ಅಲ್ಲವೇ…. ಇದಕ್ಕೆ ಆ ಅಧಿಕಾರಿಗಳೇ ಉತ್ತರಿಸಬೇಕು
Author: Karnataka Files
Post Views: 436





