ಕಬ್ಬಿನ ಬೆಲೆಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರು ರಾಜ್ಯವ್ಯಾಪಿ ಹೆದ್ದಾರಿ ಬಂದ್ ಗೆ ಕರೆ ಕೊಟ್ಟಿದ್ದಾರೆ.
ಇಂದು ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರು ಕರೆದ ಸಭೆಯಲ್ಲಿ MSP ಕುರಿತು ತೀರ್ಮಾನಕ್ಕೆ ಬರದ ಹಿನ್ನೆಲೆಯಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಗೆ ಕರೆ ಕೊಟ್ಟಿದ್ದಾರೆ.
ಇಲ್ಲೆಲ್ಲಾ ನಾಳೆ ಹೆದ್ದಾರಿ ಬಂದ್ – ರೈತರ ಪ್ರತಿಭಟನೆ
ಧಾರವಾಡ ಹುಬ್ಬಳ್ಳಿ ಬೈಪಾಸ್ ರಸ್ತೆಯ ಯರಿಕೊಪ್ಪ ಕ್ರಾಸ್ ಬಳಿ ನಾಳೆ 11 ಘಂಟೆಗೆ ರೈತರು ಪ್ರತಿಭಟನೆ ನಡೆಸಲಿದ್ದಾರೆ.
ನಾಳೆ 11 ಘಂಟೆಯಿಂದ ಹೆದ್ದಾರಿ ಬಂದ್ ಆಗಲಿದ್ದು, ಪುನಾ – ಬೆಂಗಳೂರು ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಳ್ಳಲಿದೆ.
ಹಾವೇರಿಯ ಬಂಕಾಪುರ ಟೋಲ್ ಬಂದ್
ಕರ್ನಾಟಕ ರಾಜ್ಯ ರೈತ ಸಂಘದ ಚೂನಪ್ಪಾ ಪೂಜಾರಿ, ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಹೆದ್ದಾರಿ ಬಂದ್ ಗೆ ಕರೆ ನೀಡಲಾಗಿದೆ.
ಹಾವೇರಿಯ ಬಂಕಾಪುರ ಟೋಲ್ ಬಂದ್ ಮಾಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಮಾಡಲು ಸಂಘಟನೆ ಕರೆ ಕೊಟ್ಟಿದೆ.





