ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಬಗೆದಷ್ಟು ಹಗರಣಗಳು ಹೊರ ಬರುತ್ತಿವೆ.
ಆಕ್ರವಾಗಿ ಒಬ್ಬೊಬ್ಬರಿಗೆ 3 ರಿಂದ ನಾಲ್ಕು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬುದರ ಬಗ್ಗೆ ಕರ್ನಾಟಕ ಫೈಲ್ಸ್ ಗೆ ಅಧಿಕೃತ ಧಾಖಲೆಗಳು ಸಿಕ್ಕಿವೆ.
ಅಲ್ಲಿ ಕೆಲಸ ಮಾಡುವ ಬಹುತೇಕ ನೌಕರರ ಕುಟುಂಬದವರ ಹೆಸರು ಸೇರಿದಂತೆ ಕೆಲ ಘಟಾನುಘಟಿ ರಾಜಕಾರಣಿಗಳಿಗೆ ನಿವೇಶನಗಳನ್ನು ಮಂಜೂರು ಮಾಡಲಾಗಿದೆ.
ಹುಡಾದಲ್ಲಿ ಸಭೆ ನಡೆಯುವ ಸಂದರ್ಭದಲ್ಲಿ ಕೈಚಳಕ ತೋರಿಸಿ, ಒಬ್ಬೊಬ್ಬರ ಹೆಸರಿಗೆ 3 ರಿಂದ ನಾಲ್ಕು ನಿವೇಶನ ನೀಡಿದ್ದರ ಬಗ್ಗೆ ಕರ್ನಾಟಕ ಫೈಲ್ಸ್ ಬಳಿ ಧಾಖಲೆ ಸಿಕ್ಕಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ದೊಡ್ಡ ಮಟ್ಟದ ಗೋಲ್ಮಾಲ್ ನಡೆದಿರುವದು ಬೆಳಕಿಗೆ ಬಂದಿದ್ದು, ಕರ್ನಾಟಕ ಫೈಲ್ಸ್ ಒಂದೊಂದೆ ಮಾಹಿತಿಯನ್ನು ಬಹಿರಂಗ ಪಡಿಸಲಿದೆ.
Author: Karnataka Files
Post Views: 17





