ಧಾರವಾಡದ ಪ್ರಮುಖ ರಸ್ತೆಯನ್ನು ಮೇಸ್ತ್ರಿಯೊಬ್ಬ ಗ್ಯಾರೇಜ್ ಮಾಡಿಕೊಂಡಿದ್ದಾನೆ.
ಹಳಿಯಾಳ ನಾಕಾದಿಂದ ದಾಸನಕೊಪ್ಪ ಕ್ರಾಸ್ ಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನು ಗ್ಯಾರೇಜ್ ಮಾಡಿಕೊಂಡಿದ್ದು, ವಾಹನ ಸವಾರರು ಜೀವ ಭಯದಲ್ಲಿ ಓಡಾಡುವಂತಾಗಿದೆ.
ದಾಂಡೇಲಿ ಇಂದ ಧಾರವಾಡಕ್ಕೆ ಬರುವ ಪ್ರಮುಖ ರಸ್ತೆ ಇದಾಗಿದ್ದು, ಈ ಮಾರ್ಗದಲ್ಲಿ ಓರ್ವ IFS, ಓರ್ವ IAS ಹಾಗೂ ಓರ್ವ KAS ಅಧಿಕಾರಿಯ ಮನೆ ಸಹ ಇದೆ.
ಅವರ ಮನೆಯ ಕೂಗಳತೆಯ ದೂರದಲ್ಲಿ ರಸ್ತೆ ಮೇಲೆ ವಾಹನ ನಿಲ್ಲಿಸಿ ರಿಪೇರಿ ಮಾಡಲಾಗುತ್ತಿದೆ. ಪುಟಪಾತ್ ಆಕ್ರಮಿಸಿ, ವಾಹನಗಳನ್ನು ರಸ್ತೆ ಮೇಲೆ ನಿಲ್ಲಿಸಲಾಗುತ್ತಿದೆ.
ಅಪಘಾತ ಸಂಭವಿಸುವ ಮುನ್ನ ಧಾರವಾಡ ಸಂಚಾರಿ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ಈ ಕಡೆಗೆ ಗಮನ ಹರಿಸಬೇಕಿದೆ
Author: Karnataka Files
Post Views: 2





