ಧಾರವಾಡ ಜಿಲ್ಲೆಯಲ್ಲಿ ಆಡಳಿತ ಹಳಿ ತಪ್ಪಿದೆ. ಧಾರವಾಡ ತಹಸೀಲ್ದಾರ್ ಕಚೇರಿಯಲ್ಲಿ ಯಾರದೋ ಆಸ್ತಿಯನ್ನು ಮತ್ತೊಬ್ಬರ ಹೆಸರಿಗೆ ವರ್ಗಾವಣೆ ಮಾಡಿದ ಧಾಖಲೆ ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿದೆ.
ದೊಡ್ಡನಾಯಕನಕೊಪ್ಪ ವ್ಯಾಪ್ತಿಯಲ್ಲಿ ಜಂಟಿ ಮಾಲೀಕತ್ವದಲ್ಲಿ ಇರುವ ಸರ್ವೇ ನಂಬರ 6/2 ಪೈಕಿ 8.8 ಗುಂಟೆ ಜಮೀನಿನಲ್ಲಿ ಗೋಲ್ಮಾಲ್ ನಡೆದಿದೆ.
ಧಾರವಾಡ ತಹಸೀಲ್ದಾರ್ ಕಚೇರಿಯಲ್ಲಿರುವ ಕಂದಾಯ ನಿರೀಕ್ಷಕ ಗುರು ಸುಣಗಾರ ಎಂಬುವವರು ದಿನಾಂಕ 07-07-2023 ರಂದು ಒಂದು ಟಿಪ್ಪಣಿ ಬರೆದಿದ್ದು, ಆ ಟಿಪ್ಪಣಿ ಮೂರು ಕೋಟಿ ಮೌಲ್ಯದ ಆಸ್ತಿ ಲಪಟಾಯಿಸಲು ಮೂಲ ಕಾರಣವಾಗಿದೆ.
ಟಿಪ್ಪಣಿಯಲ್ಲಿ ನಮೂದಿಸಿದಂತೆ, ಕಿಶೋರ ಹೊನ್ನಾವರ, ಪ್ರೇಮಾನಂದ ಹೊನ್ನಾವರ ಪೋತಿಯಾಗಿದ್ದು, ಅವರ ವಂಶವೃಕ್ಷ ಕಂಡು ಬರದೇ ಇರುವದರಿಂದ, ಸದರಿ ಆಸ್ತಿಗೆ ಜ್ಯೋತಿ ಶಶಿಕಾಂತ ಹೊನ್ನಾವರ, ಆಶೀಶ್ ಹೊನ್ನಾವರ, ಅರ್ಚನಾ ಸಂಗಮನೇಕರ ಇವರ ಹೆಸರು ಧಾಖಲಿಸಲು ಗುರು ಸುಣಗಾರ ವರದಿ ನೀಡಿದ್ದಾರೆ.
ಆಶ್ಚರ್ಯ ಎಂದರೆ, ಗುರು ಸುಣಗಾರ ಅವರಿಗೆ ಕಿಶೋರ್ ಹಾಗೂ ಪ್ರೇಮಾನಂದ ಪೋತಿಯಾಗಿದ್ದು, ಹೇಗೆ ಗೊತ್ತಾಯ್ತು ಅನ್ನೋದನ್ನ ಅವರೇ ಹೇಳಬೇಕು.
ಕಿಶೋರ ಹಾಗೂ ಪ್ರೇಮಾನಂದ ಹೊನ್ನಾವರ ಅವರಿಗೆ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಇದ್ದು, ವಾರಸುದಾರರಿದ್ದಾರೆ.

ಕಿಶೋರ್ ಹೊನ್ನಾವರ ಅವರ ವಂಶವೃಕ್ಷ
ಈ ಕೆಳಗಿನ ವಂಶವೃಕ್ಷ ಪ್ರೇಮಾನಂದ ಹೊನ್ನಾವರ ಅವರದ್ದು

ಹೀಗಿದ್ದಾಗ ವಂಶವೃಕ್ಷ ಲಭ್ಯವಾಗಿಲ್ಲ ಎಂದು ಹೇಳಿ ವರದಿ ನೀಡಿದ್ದು, ಮೋಸ ಮಾಡುವ ಉದ್ದೇಶದಿಂದ ಕೂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ, ಧಾರವಾಡ ತಹಸೀಲ್ದಾರ್ ಕಚೇರಿಯ ಸಿಬ್ಬಂದಿಯ ನಡುವಳಿಕೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾಡಳಿತದ ಬಗ್ಗೆ ಜನ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ, ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸರ್ವೇ ನಂಬರ 6/2 ರ ಬಗ್ಗೆ ಕುಲಂಕೂಷವಾಗಿ ತನಿಖೆ ನಡೆಸಿ, ತಪ್ಪಿತಸ್ತ ಅಧಿಕಾರಿಯನ್ನು ಅಮಾನತು ಮಾಡಬೇಕಿದೆ.

ಕರ್ನಾಟಕ ಫೈಲ್ಸ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಧಾಖಲೆಗಳನ್ನು ನೀಡಲು ತಯಾರಿದ್ದು, ಆಸ್ತಿ ಇದ್ದವರು ನೆಮ್ಮದಿಯಾಗಿ ಇರುವಂತೆ ಕ್ರಮ ಕೈಗೊಳ್ಳಬೇಕಾಗಿದೆ.





