Download Our App

Follow us

Home » ಕಾನೂನು » ಹುಬ್ಬಳ್ಳಿ ಬಿಡನಾಳದ ನಂದಿಹಳ್ಳಿ ಜಮೀನು ಖರೀದಿ ಪ್ರಕರಣ : ಗದಿಗೆಪ್ಪಗೌಡರಿಗೆ ಸಿ ಐ ಡಿ ನೋಟಿಸ್

ಹುಬ್ಬಳ್ಳಿ ಬಿಡನಾಳದ ನಂದಿಹಳ್ಳಿ ಜಮೀನು ಖರೀದಿ ಪ್ರಕರಣ : ಗದಿಗೆಪ್ಪಗೌಡರಿಗೆ ಸಿ ಐ ಡಿ ನೋಟಿಸ್

ಹುಬ್ಬಳ್ಳಿಯ ಬಿಡನಾಳದ ಮೋಹನ ಬಸಪ್ಪ ನಂದಿಹಳ್ಳಿ ಕುಟುಂಬಕ್ಕೆ ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ಅನ್ಯಾಯ ಆಗಿದ್ದರ ಕುರಿತು ಸಮಗ್ರ ತನಿಖೆ ನಡೆಸಲು ಸರ್ಕಾರ ಈ ಪ್ರಕರಣವನ್ನು ಸಿ ಐ ಡಿ ಗೆ ವಹಿಸಿದೆ. 

ಈ ಹಿನ್ನೆಲೆಯಲ್ಲಿ ನಂದಿಹಳ್ಳಿ ಕುಟುಂಬದ ಪರವಾಗಿ ದ್ವನಿ ಎತ್ತಿದ್ದ ಕಾಂಗ್ರೇಸ್ ಮುಖಂಡ ಗಿರೀಶ ಗದಿಗೆಪ್ಪಗೌಡರಿಗೆ ಸಿ ಐ ಡಿ ನೋಟಿಸ್ ನೀಡಿದೆ. 

ಪ್ರಕರಣಕ್ಕೆ ಸಂಬಂದಿಸಿದಂತೆ ತನಿಖೆ ನಡೆಸುವಂತೆ ತಾವು ದಿನಾಂಕ 25-10-2025 ರಂದು ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದು, ನನ್ನನ್ನು ವಿಚಾರಣಾಧಿಕಾರಿಯಾಗಿ ನೇಮಕ ಮಾಡಿದ್ದು, ತಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ 03-01-2026 ರಂದು ಸೂಕ್ತ ಧಾಖಲಾತಿಯೊಂದಿಗೆ ಹಾಜರಾಗಬೇಕೆಂದು ಸಿ ಐ ಯು ಸಿ ಐ ಡಿ ಘಟಕದ ಉಪ ಅಧಿಕ್ಷಕ ಸುಲೇಮಾನ ತಹಸೀಲ್ದಾರ ಅವರು ಗಿರೀಶ ಗದಿಗೆಪ್ಪಗೌಡರಿಗೆ ನೋಟೀಸ್ ನೀಡಿದ್ದಾರೆ. 

ತಮಗೆ ಬಂದಿರುವ ನೋಟಿಸಿನ ಪ್ರತಿಯನ್ನು ಗಿರೀಶ ಗದಿಗೆಪ್ಪಗೌಡರರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಕೀರ ಸನದಿ ಮುಂದುವರಿಕೆ

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಶಾಕೀರ ಸನದಿಯವರನ್ನು ಮುಂದುವರೆಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಹುಡಾ ಜೊತೆ ಗದಗ, ಹಾವೇರಿ, ಬೆಳಗಾವಿ

Live Cricket

error: Content is protected !!