ಧಾರವಾಡ ಜಿಲ್ಲಾ ಆಸ್ಪತ್ರೆ ವೈಧ್ಯಾಧಿಕಾರಿ ಡಾ. ಸಂಗಪ್ಪ ಗಾಬಿ ವರ್ಗಾವಣೆ ರದ್ದು ಗೊಳಿಸುವಂತೆ ಆಗ್ರಹಿಸಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರಿಗೆ ಮನವಿ ಮಾಡಲಾಗಿದೆ.
ಜಿಲ್ಲಾ ಆಸ್ಪತ್ರೆಗೆ ವೈಧ್ಯಾಧಿಕಾರಿಯಾಗಿ ಬಂದ ಮೇಲೆ ಡಾ. ಸಂಗಪ್ಪ ಗಾಬಿಯವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ.
ಬಡವರ ಸಂಜೀವಿನಿ ಎಂದು ಹೆಸರಾಗಿರುವ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಹೊಸ ಸ್ಪರ್ಶ ನೀಡಿರುವ ಡಾ. ಸಂಗಪ್ಪ ನವರು, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಹೆಸರು ಮಾಡಿದ್ದಾರೆ.
ಇನ್ನೇಂತಹ ಡಾಕ್ಟರ್ ಬೇಕು
ಸರ್ಕಾರ ಹಾಗೂ ಆರೋಗ್ಯ ಸಚಿವರು ವರ್ಗಾವಣೆ ಮಾಡುವ ಮುನ್ನ ಈ ಭಾಗದ ಜನರ ಭಾವನೆ, ಅಹವಾಲನ್ನು ಕೇಳಲಿ. ಡಾ. ಸಂಗಪ್ಪ ಗಾಬಿಯವರು ಬಂದ ಮೇಲೆ ಯಾವದೇ ಅವ್ಯವಹಾರಕ್ಕೆ, ಅವ್ಯವಸ್ಥೆಗೆ ಅವಕಾಶ ಮಾಡಿಕೊಡದೆ ಇರುವದಕ್ಕೆ ಈ ವರ್ಗಾವಣೆಯಾ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನೇಂತಹ ವೈದ್ಯರು ನಿಮಗೆ ಬೇಕಾಗಿದ್ದಾರೆ ಹೇಳಿ ಎಂದು ಆರೋಗ್ಯ ಸಚಿವರನ್ನು ಕೇಳುವದಕ್ಕೆ ಜನ ಸಜ್ಜಾಗಿದ್ದಾರೆ.
ಸರ್ಕಾರ ಕೂಡಲೇ ಡಾ.ಸಂಗಪ್ಪ ಗಾಬಿಯವರ ವರ್ಗಾವಣೆ ರದ್ದು ಮಾಡಿ, ಆ ಹುದ್ದೆಯಲ್ಲಿ ಮುಂದುವರಿಸಲಿ ಅನ್ನೋದು ಈ ಭಾಗದ ಜನರ ಒತ್ತಾಸೆಯಾಗಿದೆ.
ಸರ್ಕಾರ ತನ್ನ ಮೊಂಡು ವಾದ ಮುಂದುವರೆಸಿದ್ದಲ್ಲಿ, ದೊಡ್ಡ ಹೋರಾಟ ನಡೆಯುವದು ಮಾತ್ರ ಖಾತ್ರಿ ಅನ್ನೋದು ಆರೋಗ್ಯ ಸಚಿವರು ತಿಳಿದುಕೊಳ್ಳಬೇಕು.
ಡಾ. ಸಂಗಪ್ಪ ಗಾಬಿಯವರ ವರ್ಗಾವಣೆ ರದ್ದು ಮಾಡಬೇಕು ಎಂದು ಆಗ್ರಹಿಸಿ ಇಂದು ಪರಮೇಶ್ವರ ಕಾಳೆ, ಅರವಿಂದ ಏಗನಗೌಡರ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರಿಗೆ ಮನವಿ ನೀಡಲಾಗಿದೆ.





