ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಅಖಾಡಾ ಸಿದ್ದಪಡಿಸಿಕೊಳ್ಳುತ್ತಿದೆ. ಪಕ್ಷ ಸಂಘಟನೆಯಲ್ಲಿ ತೊಡಗಿರುವ ನಾಯಕರು, ಟಿಕೇಟ್ ಅಕಾಂಕ್ಷಿಗಳು, ಉಪ ಚುನಾವಣೆ ಘೋಷಣೆಯ ಹಾದಿ ನೋಡುತ್ತಿದ್ದಾರೆ.
ವಿನಯ ಕುಲಕರ್ಣಿಯವರಿಗೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಯಾದ ನಂತರ, ಬಿಜೆಪಿ ಅಂಗಳದಲ್ಲಿ ರಾಜಕೀಯ ಗರಿಗೆದರಿದೆ.
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಪಂಚಮಸಾಲಿ ಸದ್ದು
ವಿನಯ ಕುಲಕರ್ಣಿಯವರಿಗೆ ಜೀವಾವಧಿ ಶಿಕ್ಷೆ ಪ್ರಕಟವಾದ ನಂತರ, ಹಿಂದಿರುವ ಷಡ್ಯಂತ್ರದ ಬಗ್ಗೆ ಚರ್ಚೆಗಳು ನಡೆದ ಬೆನ್ನಲ್ಲೇ, ಪಂಚಮಸಾಲಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿದ್ಯ ಕೊಡಲು ಬಿಜೆಪಿ ವರಿಷ್ಟರು ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಪಂಚಮಸಾಲಿ ನಾಯಕನನ್ನು ( ವಿನಯ ಕುಲಕರ್ಣಿ ) ರಾಜಕೀಯ ಮುಗಿಸಿದರು ಅನ್ನೋ ಆರೋಪದ ಬದಲು ಸಮುದಾಯಕ್ಕೆ ಬಿಜೆಪಿ ಶಕ್ತಿ ತುಂಬುತ್ತಿದೆ ಎನ್ನುವ ಚರ್ಚೆಗಳನ್ನು ಹುಟ್ಟುಹಾಕುವಲ್ಲಿ ಬಿಜೆಪಿಯ ಒಂದು ಬಣ ಸಕ್ರಿಯವಾಗಿದೆ.
ಪಂಚಮಸಾಲಿ ನಾಯಕರ ಬಿಜೆಪಿ ಸೇರ್ಪಡೆ
ಧಾರವಾಡದಲ್ಲಿ ನಿನ್ನೆ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಪ್ರಮುಖ ಪಂಚಮಸಾಲಿ ನಾಯಕರು ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರ ನೇತ್ರತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಪಂಚಮಸಾಲಿ ಸಮುದಾಯದ ಪ್ರಮುಖರನ್ನು ಬಿಜೆಪಿಯತ್ತ ಸೆಳೆದುಕೊಳ್ಳುವದಕ್ಕೂ ಮುನ್ನ, ಕೆಲ ಮಾತು, ಚರ್ಚೆ, ಒಡಂಬಡಿಕೆಗಳು ನಡೆದಿವೆ ಎನ್ನಲಾಗಿದೆ.
ಸಧ್ಯ ಬಿಜೆಪಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಸಂಘಟನೆಯಲ್ಲಿ ತೊಡಗಿದ್ದು, ಕಾಂಗ್ರೇಸ್ ಅಂಗಳದಲ್ಲಿ ಭೂಕಂಪದ ಅನುಭವ ನೀಡಿದೆ.
ಅಮ್ಮಿನಭಾವಿ ಹಾಗೂ ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿನ ಪಂಚಮಸಾಲಿ ಮುಖಂಡರನ್ನು ಬಿಜೆಪಿಗೆ ಸೆಳೆಯುವ ಎಲ್ಲ ತಯಾರಿಗಳು ನಡೆದಿವೆ ಎನ್ನಲಾಗಿದೆ.





