ಕಿಡಗೇಡಿಗಳು ಬೀರಲಿಂಗೇಶ್ವರ ದೇವರ ಮೂರ್ತಿಯನ್ನ ಒಡೆದು ಹಾಕಿದ ಘಟನೆ ಧಾರವಾಡ ತಾಲೂಕಿನ ಅಂಬ್ಲೀಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕಳೆದ 13 ವರ್ಷದ ಹಿಂದೆ ಗ್ರಾಮ ಪಂಚಾಯತಿ ಜಾಗದಲ್ಲಿ ಕುರುಬ ಸಮಾಜದ ಮುಖಂಡರು ಈ ಪ್ರತಿಮೆಯನ್ನು ಪ್ರತಿಷ್ಟಾಪನೆ ಮಾಡಿದ್ದರು.
ನಿನ್ನೆ ರಾತ್ರಿ ಕಿಡಗೇಡಿಗಳಿಂದ ಮೂರ್ತಿ ದ್ವಂಸವಾಗಿದ್ದು, ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಕುರುಬ ಸಮಾಜವನ್ನೆ ಟಾರ್ಗೆಟ್ ಮಾಡಿ ಬೀರಲಿಂಗೇಶ್ವರ ಮೂರ್ತಿಯನ್ನು ದ್ವಂಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪಂಚಾಯತಿ ಜಾಗದಲ್ಲಿ ಗುಡಿ ಕಟ್ಟಲು ಮುಂದಾಗಿದ್ದ ಕುರುಬ ಸಮಾಜದ ಮುಖಂಡರು, ಬಂದು ನೋಡುವಷ್ಟರಲ್ಲಿ ಪ್ರತಿಮೆ ದ್ವಂಸಗೊಂಡಿತ್ತು.
ವಿವಾದ ಕೋರ್ಟ ನಲ್ಲಿ ಇರುವ ಕಾರಣಕ್ಕೆ ಕೇವಲ ಮೂರ್ತಿಯನ್ನ ಪೂಜೆ ಮಾಡಿಕ್ಕೊಂಡು ಬಂದಿದ್ದ ಗ್ರಾಮಸ್ಥರಲ್ಲಿ ಆಕ್ರೋಶ ಮನೆ ಮಾಡಿದೆ.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮುಖಂಡರು ದೂರನ್ನು ದಾಖಲಿಸಿದ್ದಾರೆ.
Author: Karnataka Files
Post Views: 725





