ರಾಜ್ಯ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಕೈಗೊಳ್ಳಲಾಗುತ್ತಿರುವ ಬರ ಅಧ್ಯಯನ ಕಾರ್ಯಕ್ರಮದ ಅಂಗವಾಗಿ ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ಯರಿನಾರಾಯಣಪುರ, ಶಿರಗುಪ್ಪಿ, ನಲವಡಿ, ಇಂಗಳಳ್ಳಿ, ಶಿಶ್ವಿನಹಳ್ಳಿ ಹಾಗೂ ಮಣಕವಾಡ ಗ್ರಾಮಗಳ ಕೃಷಿ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯನ್ನು ಪರಿಶೀಲಿಸಲಾಯಿತು.
ಬರ ಅಧ್ಯಯನ ತಂಡದ ಸದಸ್ಯ ರವಿಕುಮಾರ್, ಎ.ಎಸ್.ನಡಹಳ್ಳಿ, ಬಸವರಾಜ ಮತ್ತಿಮಾಡ, ಎಂ.ಆರ್, ಪಾಟೀಲ, ಲಿಂಗರಾಜ ಪಾಟೀಲ, ಮಹೇಶ್ ಟೆಂಗಿನಕಾಯಿ ಜೊತೆಗೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಸಾಥ್ ನೀಡಿ ರೈತರೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಹಿಂಗಾರಿ ಬೆಳೆ ಸಂಪೂರ್ಣವಾಗಿ ನಾಶವಾಗಿರುವುದರಿಂದ ಎದುರಾಗಿರುವ ಆರ್ಥಿಕ ಸಂಕಷ್ಟವನ್ನು ರೈತರು ಮುಖಂಡರ ಮುಂದೆ ಮನಮುಟ್ಟುವ ರೀತಿಯಲ್ಲಿ ವಿವರಿಸಿದರು. ಬೆಳೆ ಹಾನಿಯಿಂದ ಜೀವನೋಪಾಯಕ್ಕೆ ತೀವ್ರ ಹೊಡೆತ ಬಿದ್ದಿದ್ದು, ಸರ್ಕಾರ ತಕ್ಷಣವೇ ಸಮಗ್ರ ಬೆಳೆ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಘೋಷಿಸಬೇಕೆಂದು ರೈತರು ಆಗ್ರಹಿಸಿದರು.
ರೈತರ ಅಹವಾಲುಗಳನ್ನು ಆಲಿಸಿದ ಮುಖಂಡರು, ಬೆಳೆ ಹಾನಿಯ ಸಂಪೂರ್ಣ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತಂದು, ರೈತರಿಗೆ ನ್ಯಾಯ ದೊರಕುವಂತೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.
ನಿಂಗಪ್ಪ ಸುತಗಟ್ಟಿ, ಬಸವರಾಜ ಕುಂದಗೋಳಮಠ, ಈರಣ್ಣ ಜಡಿ, ಷಣ್ಮುಖ ಗುರಿಕಾರ, ರಾಘವೇಂದ್ರಗೌಡ ಪಾಟೀಲ, ಮಂಜುನಾಥ ಗಣಿ, ರಾಜಶೇಖರ ಕಂಪ್ಲಿ, ಷಣ್ಮುಖ ಗುಂಜಳ, ಸಿದ್ಧನಗೌಡ ಪಾಟೀಲ, ಮಹಾಬಳೇಶ್ವರಿ ಅಣ್ಣಿಗೇರಿ, ಗುರುಪಾದ ಶಿರೂರ, ಸುರೇಶ ಗಾಣಿಗೇರ, ಮಹಾಂತೇಶ ಶಾಗೋಟಿ, ಮುತ್ತು ಕೊಳ್ಳಿ, ಸಿದ್ಧಯ್ಯ ಹೊಸಮಠ, ಸೋಮಣ್ಣ ಅಣ್ಣಿಗೇರಿ, ನಿಂಗಯ್ಯ ಬಣ್ಣದಮಠ, ಮೃತ್ಯುಂಜಯ ಹಿರೇಮಠ, ಶಿವಾನಂದ ಗುಂಡಗೋವಿ ಉಪಸ್ಥಿತರಿದ್ದರು.





