ಧಾರವಾಡದ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಇಂದು ಜಿಲ್ಲಾಡಳಿತದಿಂದ ನಡೆದ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಪ್ರಗತಿ ಪರ ರೈತ, ಆಧುನಿಕ ಕೃಷಿ ಸಾಧಕ ಡಾ. ಶೌಕತ್ ಅಲಿ ಲಂಬೂನವರ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ನವಲಗುಂದ ತಾಲೂಕಿನ ನಾಗನೂರ ಗ್ರಾಮದ ಶೌಕತಅಲಿ ಅವರು ಎರಡು ಎಕರೆ ಭೂಮಿಯಲ್ಲಿ ಬಹುಬೇಳೆ ಪದ್ಧತಿ ಅನುಸರಿಸಿ, ಸಾಧನೆ ಮಾಡಿದ್ದಾರೆ.
ಇವರ ಸಾಧನೆ ಮೆಚ್ಚಿ ಧಾರವಾಡ ಕೃಷಿ ವಿವಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.
ಆಧುನಿಕ ತಂತ್ರಜ್ಞಾನದಿಂದ ಅಳವಡಿಸಿಕೊಂಡಿರುವ ಇವರು, ರೈತ ಕುಲಕ್ಕೆ ಮಾದರಿಯಾಗಿದ್ದಾರೆ.
Author: Karnataka Files
Post Views: 147





