ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಬಗೆದಷ್ಟು ಹಗರಣಗಳು ಬಯಲಾಗ್ತಿವೆ. ಧಾರವಾಡದ ದೋ ನಂಬರ ದಂಧೆಗಳೆಲ್ಲವೂ ಇದೀಗ ಶಹರ ಠಾಣೆ ವ್ಯಾಪ್ತಿಗೆ ಸ್ಥಳಾಂತರಗೊಂಡಿವೆ.
ಧಾರವಾಡ ಶಹರ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ಸಿ ಬಿ ಟಿ ಸುತ್ತಲೂ ಮೂರ್ನಾಲ್ಕು ನಕಲಿ ಆಯುರ್ವೇದ ಔಷಧಿ ಅಂಗಡಿಗಳು ನಕಲಿ ಔಷಧಿಗಳನ್ನು ಮಾರಾಟ ಮಾಡುತ್ತಿವೆ.
ಇವರಿಗೆ ಶಹರ ಠಾಣೆಯ ಕೆಲವರ ಬೆಂಬಲ ಇದೆ ಎಂಬ ಆರೋಪ ಕೇಳಿ ಬಂದಿದೆ.
ತೀರಾ ಇತ್ತೀಚಿಗೆ, ನಕಲಿ ಔಷಧಿಯಿಂದ ಮೋಸ ಹೋದವರ ಹೆಸರಲ್ಲಿ 5 ಲಕ್ಷ ಲೂಟಿ ಆಗಿದ್ದರ ಬಗ್ಗೆ ಮಾಹಿತಿ ಹೊರಬಿದ್ದಿದೆ .
ಧಾರವಾಡದ ಪ್ರತಿಷ್ಟಿತ ಮನೆತನದ ( ತನಿಖೆ ನಡೆದರೆ ಅವರ ಹೆಸರು ಧಾಖಲೆ ಸಮೇತ ತನಿಖಾಧಿಕಾರಿ ಮುಂದೆ ಹೇಳುತ್ತೇವೆ ) ಸದಸ್ಯರೊಬ್ಬರು, ನಮಗೆ ನಕಲಿ ಔಷಧಿ ನೀಡಿ ವಂಚನೆ ಮಾಡಲಾಗಿದೆ ಎಂದು ದೂರು ನೀಡಿದ್ದರು.
ಸುಮಾರು 1.5 ಲಕ್ಷ ನಮ್ಮಲ್ಲಿ ಹಣ ಪಡೆದುಕೊಂಡು ಮೋಸ ಮಾಡಲಾಗಿದೆ. ದಯವಿಟ್ಟು ನ್ಯಾಯ ಕೊಡಿಸಿ ಎಂದು ಠಾಣೆಯ ಮೆಟ್ಟಲೇರಿದ್ದರು. ಒಂದು ಅರ್ಜಿ ಬರೆಸಿಕೊಂಡು ಅವರನ್ನು ಮನೆಗೆ ಕಳಿಸಲಾಯಿತು.
ವಂಚನೆ ಮಾಡಿದವರ ಹೆಸರು ವಿಳಾಸ ಪಡೆದುಕೊಂಡ ಬಳಿಕ ಅಲ್ಲಿಗೆ ಲಗ್ಗೆ ಇಟ್ಟ ಸಿಬ್ಬಂದಿ ” ಧರ್ಮ ” ವಂತ ನಿಂದ 5 ಲಕ್ಷ ಇಸಿದುಕೊಂಡು ಆ ಕೇಸನ್ನು ಅಲ್ಲಿಗೆ ಮುಚ್ಚಿ ಹಾಕಲಾಗಿದೆ.
ಇವತ್ತಿಗೂ ಮೋಸ ಹೋದ ಆ ಪ್ರತಿಷ್ಟಿತ ಕುಟುಂಬದ ಸದಸ್ಯರು ಠಾಣೆಗೆ ಅಲೆದಾಡುತ್ತಿದ್ದಾರೆ. ಆದ್ರೆ ಇನ್ನೂವರೆಗೆ ನ್ಯಾಯ ಅಲ್ಲಿಂದ ಸಿಗುತ್ತಿಲ್ಲ ಎಂಬ ಅಸಮಾಧಾನ ಅವರಲ್ಲಿ ಮನೆ ಮಾಡಿದೆ.
ಧಾರವಾಡ ಶಹರ ಠಾಣೆ ವ್ಯಾಪ್ತಿಯ ಮದಿಹಾಳದ ಒಂಟಿ ಮಹಿಳೆಯ ಮನೆ ಮುಂದೆ ನಡುರಾತ್ರಿ ನಡೆದ ಘಟನೆ ಸಹ ಹೊರ ಬಿದ್ದಿದ್ದು, ಈ ಘಟನೆಯ ಹಿನ್ನೆಲೆಯಲ್ಲಿ ನೀಡಲಾದ ಸಣ್ಣ ದೂರು ಠಾಣೆಯಲ್ಲಿ ದೊಡ್ಡ ಸದ್ದು ಮಾಡಿದೆ.
ಒಂದೊಂದೆ ಹಗರಣಗಳು ಹೊರಬೀಳುತ್ತಿದ್ದು, ಧಾರವಾಡ ಶಹರ ಠಾಣೆ ಮೇಲೆ ಇರುವ ಜನರ ವಿಶ್ವಾಸ ಕಡಿಮೆಯಾಗುತ್ತ ಬರುತ್ತಿದೆ.
ಮದಿಹಾಳದ ಘಟನೆಯಂತೂ ತೀವ್ರ ಆತಂಕಕ್ಕೆ ಕಾರಣವಾಗಿದೆ.





