Download Our App

Follow us

Home » ಕಾನೂನು » ವಿನಯ ಕುಲಕರ್ಣಿಯವರಿಗೆ ಧಾರವಾಡದ ದಾರಿ ಸುಗಮ

ವಿನಯ ಕುಲಕರ್ಣಿಯವರಿಗೆ ಧಾರವಾಡದ ದಾರಿ ಸುಗಮ

ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಸೆಪ್ಟೆಂಬರ್ 5, 2021 ರಿಂದ ಧಾರವಾಡದಿಂದ ದೂರ ಇದ್ದ ಧಾರವಾಡ ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕ ವಿನಯ ಕುಲಕರ್ಣಿಯವರಿಗೆ ಧಾರವಾಡದ ದಾರಿ ಸುಗಮಗೊಂಡಿದೆ.

ಮೊನ್ನೆಯಷ್ಟೇ ಜನಪ್ರತಿನಿದಿಗಳ ನ್ಯಾಯಾಲಯ ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ತಂದು ಜಾಮೀನು ಪಡೆದುಕೊಂಡಿದ್ದ ಅವರಿಗೆ ಸಾಕ್ಷಿನಾಶ ಪ್ರಕರಣದಲ್ಲಿ ಧಾರವಾಡ ಪ್ರವೇಶಕ್ಕೆ ಇದ್ದ ನಿರ್ಬಂಧ ತೆರವುಗೊಳಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಧಾರವಾಡ ಪ್ರವೇಶಕ್ಕೆ ಇದ್ದ ನಿರ್ಬಂಧ ಸಡಿಲುಗೊಳಿಸಿ  ಇಂದು ಜನಪ್ರತಿನಿದಿನಗಳ ನ್ಯಾಯಾಲಯ ಆದೇಶ ಹೊರಡಿಸಿದೆ. ಧಾರವಾಡ ಪ್ರವೇಶಕ್ಕೆ ದಾರಿ ಸುಗಮಗೊಂಡಿದೆ.

29  ರಂದು ಅಮ್ಮಿನಭಾವಿ ಗ್ರಾಮದಲ್ಲಿ ನಡೆಯುವ ಜನಸ್ಪಂಧನದಲ್ಲಿ ವಿನಯ ಕುಲಕರ್ಣಿ ಭಾಗಿ 

5 ವರ್ಷಗಳಿಂದ ಕ್ಷೇತ್ರದಿಂದ ಹೊರಗಡೆ ಇದ್ದ ವಿನಯ ಕುಲಕರ್ಣಿಯವರು 28 ಕ್ಕೆ ಧಾರವಾಡಕ್ಕೆ ಆಗಮಿಸುವ ನಿರೀಕ್ಷೆ ಇದೆ. 5 ವರ್ಷಗಳ ನಂತರ ಕ್ಷೇತ್ರಕ್ಕೆ ಬರುವ ಅವರು ಕಾರ್ಯಕರ್ತರನ್ನು, ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದಾರೆ.

ದಿನಾಂಕ 29 ರಂದು ಅಮ್ಮಿನಭಾವಿ ಗ್ರಾಮದಲ್ಲಿ ನಡೆಯುವ ಜನಸ್ಪಂಧನ ಕಾರ್ಯಕ್ರಮದಲ್ಲಿ ವಿನಯ ಕುಲಕರ್ಣಿಯವರು ಭಾಗವಹಿಸಲಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!