ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆಯುತ್ತಿದ್ದ,ಸಾಮಾಜಿಕ ಹೋರಾಟಗಾರ, ಪ್ರಕಾಶ ರಾಜ್ ರ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಲು ಯತ್ನಿಸಿದ ಘಟನೆ ನಡೆಯಿತು.
ಎದ್ದೇಳು ಕರ್ನಾಟಕ ಮತ್ತು ನಾಗರಿಕ ಮತ ಕಾವಲು ಸಮಿತಿ ಸದಸ್ಯರ ಜೊತೆಯಲ್ಲಿ ಸಂವಾದ ಮಾಡಲು ಪ್ರಕಾಶ ರಾಜ್ ಧಾರವಾಡಕ್ಕೆ ಬಂದಿದ್ದರು.
ಜೊತೆ ವೇಳೆ ವಿದ್ಯಾವರ್ಧಕ ಸಂಘದ ಅವರಣದ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಧರ್ಮಸ್ಥಳ ವಿರೋಧಿ ಪ್ರಕಾಶ ರಾಜ್ ಗೆ ದಿಕ್ಕಾರ ಎಂಬ ಘೋಷಣೆ ಕೂಗಿದರು.
ಹೊರಗಡೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವದನ್ನು ಅರಿತ ಪ್ರಗತಿಪರರು, ಬಿಜೆಪಿ ಪ್ರತಿಭಟನೆಗೆ ಸೆಡ್ದು ಹೊಡೆದರು.
ಪ್ರಕಾಶ ರಾಜ್ ಗೆ ಸ್ವಾಗತ, ದೇಶಪ್ರೇಮಿಗೆ ಸ್ವಾಗತ ಎಂಬ ಘೋಷಣೆ ಕೂಗಿದರು.
ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಬಂದಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಅಲ್ಲಿಂದ ಚದುರಿಸಿದರು.
Author: Karnataka Files
Post Views: 870





