ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಚಾಕು ಇರಿತ ಪ್ರಕರಣಗಳನ್ನು ಹತ್ತಿಕ್ಕಲು ಹೊಸದಾಗಿ ಬಂದಿರುವ ಪೊಲೀಸ್ ಕಮಿಷನರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಅವಳಿ ನಗರದಲ್ಲಿ ಚಾಕು, ತಲ್ವಾರ್ ಸೇರಿದಂತೆ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಜನರನ್ನು ಹೆದರಿಸುತ್ತ, ಓಡಾಡುವವರ ಕೈಗೆ ಕೊಳ ತೊಡಿಸಲು ಮುಂದಾಗಿದ್ದಾರೆ.
ಹುಬ್ಬಳ್ಳಿ ಧಾರವಾಡದಲ್ಲಿ ಇರಿತ ವಿರೋಧಿ ದಳಗಳನ್ನು ( Anti Stabbing Squads ) ಪ್ರಾರಂಭಿಸಲಾಗಿದೆ.
ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಜನರು ಯಾವುದೇ ಮಾರಕ ಆಯುಧಗಳನ್ನು ಹೊಂದಿದ್ದಾರೆಯೇ ಎಂದು ಅವರು ಪರಿಶೀಲಿಸುತ್ತಾರೆ.
ಅಂತಹ ವ್ಯಕ್ತಿಗಳು ಕಂಡುಬಂದಲ್ಲಿ, ಅವರ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಕಮಿಷನರ್, ಭೂಷಣ್ ಬೊರಸೆ ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರಾಗಿ ಬಂದ ವಾರದಲ್ಲಿಯೇ ಬೊರಸೆ ಅವರು, ತಮ್ಮ ವಿಶಿಷ್ಟ ಶೈಲಿಯಲ್ಲಿ ಸೈಲೆಂಟ್ ಸ್ಟ್ರೋಕ್ ಕೊಡುತ್ತಿದ್ದು, ಅಸಲಿ ಖಾಕಿ ಖದರ್ ಈಗ ಆರಂಭವಾಗಿದೆ.
Author: Karnataka Files
Post Views: 174




