ಶಂಕರ ಪಾಟೀಲ್ ಮುನೇನಕೊಪ್ಪ ಬಿಜೆಪಿಗೆ ಗುಡ್ ಬೈ ಹೇಳ್ತಾರೆ ಅನ್ನೋ ಮಾತು ಕಳೆದ ಹದಿನೈದು ದಿನಗಳಿಂದ ಧಾರವಾಡ ಜಿಲ್ಲೆಯಲ್ಲಿ ಬಹುಚರ್ಚಿತ ವಿಷಯವಾಗಿದೆ. ನವಲಗುಂದ ತಾಲೂಕಿನಾಧ್ಯಂತ ಕಟ್ಟೆಯ ಮೇಲೆ ಕುಳಿತರು, ಹೋಟೆಲ್ ನಲ್ಲಿ ಕುಳಿತರು ಮಾತನಾಡುವದು ಇದೊಂದೇ ವಿಷಯ. ಅಂದ ಹಾಗೇ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಕಾಂಗ್ರೇಸ್ ಸೇರ್ತಾರಾ ಅಂತ ಶಾಸಕ ಕೋನರೆಡ್ಡಿ ಅವರಿಗೆ ಕೇಳಿದರೆ ಏನಂದ್ರು ಗೊತ್ತಾ…. ಆ ವಿಷಯ ಅವರಿಗೆ ಗೊತ್ತೇ ಇಲ್ಲವಂತೆ. ಕಾಂಗ್ರೇಸ್ ಸೇರ್ತಾರೆ ಅಂತ ಮಾಧ್ಯಮದಲ್ಲಿ ಕೇಳಿದ್ದೇನೆ. ಇಡೀ ಬಿಜೆಪಿಯೇ ಬಂದರೆ ಬರಬಹುದು ಅಂತ ನಸು ನಕ್ಕ ಕೋನರೆಡ್ಡಿಯವರು, ನನ್ನದೇನಿದ್ದರು ಕ್ಷೇತ್ರದ ಅಭಿವೃದ್ಧಿ ಕುರಿತು ಮಾತ್ರ ಗಮನ ಹರಿಸುತ್ತೇನೆ ಎಂದರು.
Author: Karnataka Files
Post Views: 2





