ಬಿಜೆಪಿಗೆ ” ಮಿಯಾ ” ಮುಸ್ಲಿಂ ಮತಗಳೇ ಬೇಡ, ಅವರ ಅವಶ್ಯಕತೆ ನಮಗಿಲ್ಲ ಎಂದು ಆಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಸರ್ಮಾ ಹೇಳಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬಿಸ್ವಾ, ದ್ವೇಷ ಕಾರುವ ಹೇಳಿಕೆ ನೀಡಿದ್ದಾರೆ. ಒಂದೆಡೆ ಆರ್ ಎಸ್ ಎಸ್ ಮತ್ತೊಂದೆಡೆ ಪ್ರಧಾನಿ ಮೋದಿ ಮುಸ್ಲಿಂ ಸಮುದಾಯದವರ ಜೊತೆ ವೈರತ್ವ ಬೇಡ, ಅವರು ನಮ್ಮವರೇ ಎಂದು ಹೇಳಿದರೆ ಮತ್ತೊಂದೆಡೆ, ಆಸ್ಸಾಮ್ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಹೇಳಿಕೆಗೆ ರಾಷ್ಟದಾದ್ಯಂತ ಖಂಡನೆ ವ್ಯಕ್ತವಾಗಿದೆ. ಸಂವಿಧಾನದ ಆಶಯಗಳನ್ನು ಹೊಸಕಿ ಹಾಕುವ, ವಿವಿಧತೆಯಲ್ಲಿ ಏಕತೆ ಸಾರುವ ಪ್ರಜಾಪ್ರಭುತ್ವ ಹೊಂದಿದ ದೇಶದಲ್ಲಿ ಈ ರೀತಿ ಒಡಕಿನ ಹೇಳಿಕೆ ಕೊಟ್ಟಿರುವ ಬಿಸ್ವಾ ಗೆ ನೆಟ್ಟಿಗರು ಮಂಗಳಾರತಿ ಮಾಡಿದ್ದಾರೆ.
Author: Karnataka Files
Post Views: 3





